ಪದೇ ಪದೇ ಭಾರತದ ವಿಚಾರದಲ್ಲಿ ಬಾಲ ಬಿಚ್ಚಿ ತಗಾದೆ ತೆಗೆದು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಕೆನಡಾಗೆ ಭಾರತ ಸರಿಯಾಗಿ ಬಿಸಿ ಮುಟ್ಟಿಸಿದೆ. ಕೆನಡಾದ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಮತ್ತು ಉಳಿದ ಐದು ರಾಜತಾಂತ್ರಿಕರನ್ನು ಭಾರತ ಬಿಟ್ಟು ಹೊರಡುವಂತೆ ಸೂಚಿಸಿದೆ.
ಅಕ್ಟೋಬರ್ 19 ರ ಮಧ್ಯರಾತ್ರಿಯ ಒಳಗೆ ಈ ರಾಜತಾಂತ್ರಿಕ ಅಧಿಕಾರಿಗಳು ಭಾರತ ಬಿಟ್ಟು ಮರಳಿ ಕೇರಳಗೆ ಹೊರಡಬೇಕಿದೆ. ಅಲ್ಲಿಗೆ ಈ ಬೆಳವಣಿಗೆ ಮೂಲಕ ಭಾರತ & ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಅಧಪತನವಾದಂತೆ.
ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಸಂಬಂಧ ಭಾರತದ ಹೈಕಮಿಷನರ್ ಈ ಹತ್ಯೆಯ ಸಂಚಿನ ಹಿಂದೆ ಇರಬಹುದು ಎಂಬ ಕೆನಡಾ ಹೇಳಿಕೆ ಭಾರತವನ್ನು ಕೆರಳಿಸಿದೆ. ಈ ಹೇಳಿಕೆ ಬಳಿಕ ಭಾರತ ಕೆನಡಾದ ರಾಜತಾಂತ್ರಿಕರನ್ನು ಈ ಬಗ್ಗೆ ವಿವರಣೆ ಕೇಳಿತ್ತು.