ಲೋಕಸಭಾ ಚುನಾವಣಾ(Lokasabha Election) ಫಲಿತಾಂಶ ಜೂನ್ 4 ಮಂಗಳವಾರ ಹೊರ ಬೀಳಲಿದೆ. ಆದರೆ ಜೂನ್ 1 ರಂದು ಮತದಾನೋತ್ತರ ಸಮೀಕ್ಷೆಗಳ ಮಾಹಿತಿ ಹೊರ ಬಿದ್ದಿದ್ದು ಬಿಜೆಪಿ ನೇತೃತ್ವದ NDA ಸರ್ಕಾರ 3ನೇ ಬಾರಿ ಅಧಿಕಾರದ(Officers) ಗದ್ದುಗೆ ಏರೋದು ಕನ್ಪರ್ಮ್ ಎನ್ನುತ್ತಿದೆ. ಬಿಜೆಪಿ(BJP) ನಾಯಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಕಾಂಗ್ರೆಸ್(Congress) ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ನಾವು 295 ಸ್ಥಾನಗಳನ್ನು ಗೆದ್ದೇ ಗೆಲ್ತೇವೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Karge) ಸೇರಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಈಗ ಬಂದಿರುವುದು ಮೋದಿ(Modi) ಮೀಡಿಯಾದ ಸರ್ವೇ(Survey) ಎನ್ನುವ ಮೂಲಕ ಅಣಕ ಮಾಡಿದ್ದಾರೆ. ಆದರೆ ಈ ರೀತಿಯ ಅಚಲ ವಿಶ್ವಾಸಕ್ಕೆ ಕಾರಣ ಏನಿರಬಹುದು ಎನ್ನುವ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರನ್ನೇ ಕಾಡುತ್ತಿದೆ.
ಇತ್ತೀಚಿಗಿನ ವರ್ಷಗಳಲ್ಲಿ ಬಹುತೇಕ ಸರ್ವೇಗಳು ಮೋದಿ ನೇತೃತ್ವದ ಬಿಜೆಪಿ ಪರವಾಗಿ ಬರುವುದು ಕಂಡು ಬರುತ್ತಿದೆ. ಅದರಲ್ಲಿ ಕೆಲವು ಬಾರಿ ಕಾಂಗ್ರೆಸ್ ಕೂಡ ಗೆದ್ದು ಬೀಗಿದೆ. ಅಂದರೆ ಮೋದಿಯನ್ನು(Modi) ಮೆಚ್ಚಿಸಲು ಟಿವಿ ಮಾಧ್ಯಮದವರು ಬೇಕಾಬಿಟ್ಟಿ ಸರ್ವೇ ಮಾಡುತ್ತಾರೆ ಅನ್ನೋದು ಕಾಂಗ್ರೆಸ್ನ ನಂಬಿಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆ (Vidanasabha Election) ವೇಳೆ ಸರ್ವೇಗಳಲ್ಲಿ ಬಿಜೆಪಿಗೆ 95 ಸ್ಥಾನ ನೀಡಿದ್ದವು. ಕಾಂಗ್ರೆಸ್ ಪಕ್ಷ ಹಾಗು ಬಿಜೆಪಿ ಪಕ್ಷ ಸಮಬಲ ಸಾಧಿಸಲಿವೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ(Congress Party) ಮ್ಯಾಜಿಕ್ ನಂಬರ್(Magic Number) 113 ಅಂಕಿಯನ್ನು ದಾಟಿ, 135 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಅಂದರೆ ಸರ್ವೇಗಳ ಲೆಕ್ಕಾಚಾರ ಹಳಿ ತಪ್ಪಿದೆ ಎನ್ನುವುದು ಬಟಾಬಯಲಾಗಿತ್ತು.
ಕರ್ನಾಟಕದಲ್ಲಿ(Karnataka) ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೇ ಕಾರಣದಿಂದ ಲೋಕಸಭಾ ಚುನಾವಣೆ ವೇಳೆ ಮೋದಿ ಮೀಡಿಯಾಗಳ ಫ್ಯಾಂಟಸಿ ಸಮೀಕ್ಷೆ ಎಂದಿದ್ದಾರೆ ರಾಹುಲ್ ಗಾಂಧಿ(Rahul Gandhi). ಚಾರ್‌ಸೋ ಪಾರ್ ಅನ್ನೋ ಘೋಷಣೆ(Announcement) ಜೊತೆಗೆ ಚುನಾವಣೆ ಮಾಡಿದ್ದ ಬಿಜೆಪಿಯನ್ನು ಮೆಚ್ಚಿಸಲು ಈ ರೀತಿಯ ಸರ್ವೇ ಕೊಡಲಾಗಿದೆ. ಆದರೆ ಈ ಸಲ ಮೋದಿ ಪ್ರಧಾನಿ ಆಗಲ್ಲ, ಇಂಡಿಯಾ(India) ಕೂಟವೇ ಅಧಿಕಾರಕ್ಕೆ ಬರೋದು ನಿಶ್ಚಿತ ಅನ್ನೋ ನಂಬಿಕೆ ಕಾಂಗ್ರೆಸ್ ಪಕ್ಷದ್ದು. ಆದ್ರೆ ಎಲ್ಲಾ ಸರ್ವೇಗಳಲ್ಲೂ ಮೋದಿ ಸರ್ಕಾರವೇ ನಿಶ್ಚಿತ ಎನ್ನುತ್ತಿವೆ.
ನ್ಯೂಯಾರ್ಕ್ ಟೈಮ್ಸ್(New York Teams), ಅಲ್ ಝಜೀರಾ ಸೇರಿದಂತೆ ಇಂಟರ್ನ್ಯಾಷನಲ್(International) ಮೀಡಿಯಾಗಳಲ್ಲೂ ಮೋದಿಗೆ ಬಹುಪರಾಕ್ ಎನ್ನುತ್ತಿವೆ. ಆದರೆ ಯಾವುದೇ ರಾಜಕೀಯ ಪಕ್ಷ ಮತದಾನ ನಡೆದ ದಿನ ಮತಗಳ ಎಣಿಕೆ ಜೊತೆಗೆ ಬೂತ್ ಮಟ್ಟದಲ್ಲಿ ಎಷ್ಟೆಷ್ಟು ಮತಗಳಿಕೆ ಆಗಿದೆ ಅನ್ನೋ ಲೆಕ್ಕಚಾರ ಸಂಗ್ರಹ ಮಾಡುವುದು ರೂಢಿ. ಅದರಂತೆ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಮಾಹಿತಿ ಸಂಗ್ರಹ ಮಾಡಿರುತ್ತಾರೆ. ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ 295 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದೆ. ರಾಹುಲ್ ಗಾಂಧಿ ಕೂಡ ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮೀಡಿಯಾ ಸಮೀಕ್ಷೆ. ಇದು ಮೋದಿಯವರ ಫ್ಯಾಂಟಸಿ ಸಮೀಕ್ಷೆ. ಸಿಧು ಮೂಸೆವಾಲಾರ 295 ಹಾಡು ಕೇಳಿದ್ದೀರಾ..? ಕಾಂಗ್ರೆಸ್‌ಗೆ ಈಸಲ 295 ಸೀಟು ಪಕ್ಕಾ ಎಂದಿದ್ದಾರೆ. ಸರ್ವೇ ಬಹುತೇಕ ಸಮಯದಲ್ಲಿ ಸತ್ಯವಾಗಿರುವುದು ನಿಜ. ಕೆಲವೊಮ್ಮೆ ಸರ್ವೇ ಲೆಕ್ಕಾಚಾರ(Calculate) ಉಲ್ಟಾ ಆಗಿರುವುದೂ ಕೂಡ ಅಷ್ಟೇ ಸತ್ಯ. ಕಾಂಗ್ರೆಸ್(Congress) ವಿಶ್ವಾಸಕ್ಕೆ ಉತ್ತರ ನಾಳೆ ಮಧ್ಯಾಹ್ನದ ವೇಳೆಗೆ ಸಿಗಲಿದೆ.