ಬೆಂಗಳೂರು : ಭಾರತ ಮತ್ತು ಯುರೋಪಿಯನ್ ಒಕ್ಕೂಟ ಮಂಗಳವಾರ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಯುರೋಪಿನಿಂದ ಆಮದು ಮಾಡಿಕೊಳ್ಳುವ ಸುಮಾರು 97% ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲು ಮತ್ತು ಕೆಲವು ಸಂದರ್ಭಗಳಲ್ಲಿ ತೆಗೆದುಹಾಕಲು ಭಾರತ ಒಪ್ಪಿಕೊಂಡಿರುವುದರಿಂದ ಪ್ರತಿ ವರ್ಷ ಸುಂಕಗಳಲ್ಲಿ 4 ಬಿಲಿಯನ್ ಉಳಿಕೆಯಾಗುತ್ತದೆ ಎಂದು ಯುರೋಪಿಯನ್ ಒಕ್ಕೂಟ ತಿಳಿಸಿದೆ.
ಭಾರತ-ಯುರೋಪ್ ಒಕ್ಕೂಟ ನಡುವಿನ ಸಂಬಂಧಗಳನ್ನು ಜಾಗತಿಕ ‘ಬೆಳವಣಿಗೆಯ ಡಬಲ್ ಎಂಜಿನ್’ಗಳಾಗಿವೆ. ಈ ಸಂಬಂಧಗಳನ್ನು ಮುಂದುವರೆಸಲು ಅಗತ್ಯ ಕ್ರಮಗಳನ್ನು ಕೈಗೊಂಡು ವ್ಯಾಪಾರ ಮಾಡಬೇಕು. ‘ಚೆಂಡು ನಿಮ್ಮ ಅಂಗಳದಲ್ಲಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ ನಡುವೆ ಭಾರತ ಮತ್ತು ಯುರೋಪ್ ಒಕ್ಕೂಟವು ವಿಶ್ವದಲ್ಲಿ ಸ್ಥಿರತೆಗಾಗಿ ಆಶಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪಂದದ ಬಳಿಕ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : BENGALURU: ಮನೆ ಬಾಡಿಗೆಗೆ ಕೊಡುವವರಿಗೆ ಪೊಲೀಸರಿಂದ ವಾರ್ನಿಂಗ್: ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ
ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿ, ಈ ಒಪ್ಪಂದವು “ನಮ್ಮ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸುತ್ತದೆ. ವ್ಯಾಪಾರ, ಹೂಡಿಕೆ ಮತ್ತು ಜಾಗತಿಕ ಮಟ್ಟದಲ್ಲಿ ನಾವೀನ್ಯತೆಯನ್ನು ಹೆಚ್ಚಿಸುತ್ತದೆ. ಇದು ಸ್ಥಿರ, ಸಮೃದ್ಧ ಮತ್ತು ಭವಿಷ್ಯಕ್ಕೆ ಭದ್ರವಾದ ಆರ್ಥಿಕ ಸಂಬಂಧವನ್ನು ರೂಪಿಸುವ ನಿಟ್ಟಿನಲ್ಲಿರುವ ನಮ್ಮ ಹಂಚಿಕೆಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ಒಪ್ಪಂದವು ಎಲ್ಲಾ ಒಪ್ಪಂದಗಳ ತಾಯಿ. ಜಾಗತಿಕ ವೇದಿಕೆಯಲ್ಲಿ ಎರಡು ಪ್ರಮುಖ ಆರ್ಥಿಕತೆಗಳ ನಡುವಿನ ಪಾಲುದಾರಿಕೆಯ “ಪರಿಪೂರ್ಣ” ಉದಾಹರಣೆಯಾಗಿದೆ ಎಂದು ಮೋದಿ ಶ್ಲಾಘಿಸಿದರು.
ಇನ್ನೂ ಯುರೋಪಿಯನ್ ಒಕ್ಕೂ ಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಒಪ್ಪಂದವನ್ನು ಶ್ಲಾಘಿಸಿ ಇತಿಹಾಸ ಸೃಷ್ಟಿಸಲಾಗಿದೆ ಎಂದು ಹೇಳಿದರು.

ನಾವು ಎರಡು ನೂರು ಕೋಟಿ ಜನರ ಮುಕ್ತ ವ್ಯಾಪಾರ ವಲಯವನ್ನು ರಚಿಸಿದ್ದೇವೆ, ಇದೊಂದು ಮಹತ್ವದ ಒಪ್ಪಂದವಾಗಿದ್ದು, ಇದರಿಂದ ಎರಡೂ ಕಡೆಯವರು ಪ್ರಯೋಜನ ಪಡೆಯಲಿದ್ದಾರೆ. ಇದು ಕೇವಲ ಆರಂಭ, ನಾವು ನಮ್ಮ ಕಾರ್ಯತಂತ್ರದ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಒಪ್ಪಂದದ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಭಾರತ ಮತ್ತು ಯುರೋಪ್ ರಾಷ್ಟ್ರಗಳ ಮೇಲೆ ಸುಂಕಗಳ ಏರಿಕೆಯ ಬೆದರಿಕೆಯ ವೇಳೆಯೇ ಈ ವ್ಯಾಪಾರ ಒಪ್ಪಂದದ್ದು, ಭಾರತವು ಟ್ರಂಪ್‌ಗೆ ಸೆಡ್ಡು ಹೊಡೆದಂತಾಗಿದೆ.













