ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,628 ಹೊಸ ಸೋಂಕುಗಳು ವರದಿಯಾದೆ. ದೈನಂದಿನ ಕೋವಿಡ್ -19 ಪ್ರಕರಣಗಳ ಸಂಖ್ಯೆ ಗುರುವಾರ ಕೊಂಚ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಡ್ಯಾಶ್ಬೋರ್ಡ್ ಪ್ರಕಾರ, ಒಟ್ಟು ಸೊಂಕಿತರ ಸಂಖ್ಯೆ 4,31,44,820 ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ ಹದಿನೆಂಟು ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು 2,167 ಜನರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವುಗಳು ಸಂಖ್ಯೆ 5,24,525 ಏರಿದರೆ ಚೇತರಿಸಿಕೊಂಡವರ ಸಂಖ್ಯೆ 4,26,04,881 ಕ್ಕೆ ಏರಿದೆ. 15,414 ಸಕ್ರಿಯ ಪ್ರಕರಣಗಳು ಇದೆ.
ಬುಧವಾರದ 2,124 ಸೋಂಕುಗಳು ದಾಖಲಾಗಿದ್ದಕ್ಕಿಂತ ಶೇಕಡಾ 23 ರಷ್ಟು ಪ್ರಕರಣಗಳು ಗುರುವಾರ ಹೆಚ್ಚಾಗಿದೆ.