ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ಜೊತೆ ಮೈಸೂರು ದಸರಾ 2025 ಆಚರಣೆಯ ಅಂಗವಾಗಿ ಆಹಾರ ಮೇಳ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಆಹಾರ ಮೇಳವು ರಾಜ್ಯ ಮತ್ತು ದೇಶದ ವಿವಿಧ ಭಾಗಗಳ ಖಾದ್ಯಗಳ 140 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು ನಾಡ ಹಬ್ಬವನ್ನು ವೀಕ್ಷಿಸಲು ಮೈಸೂರಿನಲ್ಲಿ ನೆರೆದಿರುವ ಆಹಾರ ಪ್ರಿಯರನ್ನು ತೃಪ್ತಿಪಡಿಸುವ ಮೂಲಕ ದಸರಾ ಹಬ್ಬದ ವೈಭವವನ್ನು ಹೆಚ್ಚಿಸಲು ಸಜ್ಜಾಗಿದೆ.










