ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್ ಸಿಂಹರವರು ಹೇಳಿಕೆ ನೀಡುತ್ತಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯ ಸ್ವಜಾತಿಯವರನ್ನು ಎತ್ತಿಕಟ್ಟಿ ಬೇರೆ ಸಮುದಾಯದ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ ಎಂದು ಹೇಳಿಕೆ ನೀಡುವುದರ ಮೂಲಕ ಇತರ ಸಮಾಜದವರನ್ನು ಕುರುಬ ಸಮುದಾಯದ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸುವುದಕ್ಕೆ ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗಿದೆ.
ವಕೀಲರಾದ ಪುಟ್ಟಸಿದ್ದೇಗೌಡ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಇತರೆ ಸಮಾಜದವರನ್ನು ಕುರುಬ ಸಮಾಜದ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸಲು ಸಂಚು ಮಾಡಿ, ಕೋಮು ಗಲಭೆ ಸೃಷ್ಟಿಯಾಗುವಂತಹ ಹೇಳಿಕೆಗಳನ್ನು ಪ್ರತಾಪ ಸಿಂಹ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಿದ್ದರಾಮಯ್ಯನವರು ಸ್ವಜಾತಿಯವರನ್ನು ಎತ್ತಿ ಕಟ್ಟಿ ಗಲಾಟೆ ಮಾಡಿಸಿದ್ದಾರೆ. ಬೇರೆ ಸಮುದಾಯದವರು ತಿರುಗಿ ಬಿದ್ದರೆ ಇವರು ಏನು ಮಾಡೋಕೆ ಆಗುತ್ತೆ. ನಮಗೂ ಗಲಾಟೆ ಮಾಡಿಸಲು ಶಕ್ತಿ ಇದೆ, ಸಿದ್ದರಾಮಯ್ಯನವರಿಗೆ ಕುರುಬರು ಅಷ್ಟೇ ಸಾಕೇ? ಬೇರೆ ಜಾತಿಯವರು ಬೇಡವೇ ಎಂದು ಪ್ರತಾಪ ಸಿಂಹ ಹೇಳುವ ಮೂಲಕ ಕುರುಬರ ವಿರುದ್ಧ ಇತರೆ ಸಮುದಾಯದವರನ್ನು ಎತ್ತಿ ಕಟ್ಟಿ, ವರುಣಾದಲ್ಲಿ ಜಾತಿ ಸಂಘರ್ಷ ನಡೆಸಲು ಸಂಚು ಹೂಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜ್ಯದ ಇತರೆ ಸಮಾಜದವರು ಕುರುಬರನ್ನು ಕೀಳಾಗಿ ನೋಡುವಂತೆ ಹೇಳಿಕೆ ನೀಡಿದ್ದಾರೆ, ಇವರ ವಿರುದ್ಧ ಮಾನಹಾನಿ ಪ್ರಕರಣಗಳನ್ನೂ ಸಹ ದಾಖಲಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಮತ್ತು ವರುಣ ಕ್ಷೇತ್ರದಲ್ಲಿ ಸಾಮರಸ್ಯವನ್ನು ಹಾಳುಮಾಡಿ ಕೋಮು ಗಲಭೆಗಳು ಸೃಷ್ಟಿಯಾಗುವಂತಹ ಹೇಳಿಕೆಗಳನ್ನು ನೀಡುತ್ತಿರುವುದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಆರೋಪಿಸಲಾಗಿದೆ.
ಕುರುಬ ಸಮುದಾಯದ ವಿರುದ್ಧ ಇತರೆ ಸಮುದಾಯಗಳನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವ ಉದ್ದೇಶವನ್ನು ಪ್ರತಾಪ್ ಸಿಂಹ ರವರು ಹೊಂದಿದ್ದು, ಇದೇ ರೀತಿ ವರುಣ ಕ್ಷೇತ್ರದಲ್ಲಿ ಜಾತಿ ಜಾತಿಗಳ ನಡುವೆ ಎತ್ತಿಕಟ್ಟಿ ಜನರ ಭಾವನೆಗಳನ್ನು ಕೆರಳಿಸುತ್ತಾ ಹೋದರೆ ಸರ್ವ ಜಾತಿ ಜನಾಂಗದವರು ಒಂದಾಗಿ ಬದುಕು ನಡೆಸುತ್ತಿರುವ ವರುಣ ಕ್ಷೇತ್ರದ ಜನತೆಯ ಪರಿಸ್ಥಿತಿ ಏನಾಗಬೇಕು ಆ ಕಾರಣದಿಂದ ಉದ್ದೇಶಪೂರ್ವಕವಾಗಿ ಕುರುಬ ಸಮುದಾಯದವರ ವಿರುದ್ಧ ಇತರ ಸಮುದಾಯದ ಜನರನ್ನು ಎತ್ತಿಕಟ್ಟಿ, ಗಲಾಟೆ ಮಾಡಿಸಲು ಸಂಚು ರೂಪಿಸಿರುವ ಪ್ರತಾಪ್ ಸಿಂಹ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.