ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನರು ತತ್ತರಿಸಿ ಹೋಗಿದ್ದಾರೆ. ಹಲವು ಜನವಸತಿ ಪ್ರದೇಶದ ಜಲಾಂವೃತವಾಗದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಳೆಯಿಂದಾಗಿ ತೊಂದರೆಗೊಳಗಾದ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಬಿಎಂಟಿಸಿ ಬಸ್ ನಲ್ಲಿ ಇಂದು ಸಿಟಿ ರೌಂಡ್ಸ್ ಮಾಡಲಿದ್ದಾರೆ. ಮಳೆ ಹಾನಿ ಸಂಬಂಧ ಸ್ಥಳೀಯರಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆಯುತ್ತಿದ್ದಾರೆ.
ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಮೊದಲು ಕಮಲಾನಗರಕ್ಕೆ ಭೇಟಿ ನೀಡಿದ್ದಾರೆ. ನಂತರ ನಾಗವಾರದ ಮೆಟ್ರೊ ನಿಲ್ದಾಣ, 11.45 ರಿಂದ 12 ಕ್ಕೆ ಹೆಚ್ ಬಿಆರ್ ಲೇಔಟ್. 12.10 ರಿಂದ 12.20 ಕ್ಕೆ ಹೆಬ್ಬಾಳದ ಎಸ್ ಟಿಪಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ನಿನ್ನೆಯಷ್ಟೇ ಮಳೆ ನೀರು ಮನೆಗೆ ನುಗ್ಗಿದ್ದರೆ ಅಂತಹ ಕುಟುಂಬಗಳಿಗೆ 25 ಸಾವಿರೂ ಪರಿಹಾರವನ್ನು ಸಿಎಂ ಬೊಮ್ಮಾಯಿ ಷೋಷಿಸಿದ್ದರು.