ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ಹಾಗೂ ಟಿಪ್ಪು ನಿಜ ಕನಸು ಪುಸ್ತಕ ಬಿಡುಗಡೆ ಸದ್ದು ಜೋರಾಗಿ ಮಾಡುತ್ತಿದ್ದು ಈ ಬಗ್ಗೆ ಬರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಬಿಡುಗಡೆಯಾದ ಟಿಪ್ಪು ನಿಜ ಕನಸುಗಳು ಪುಸ್ತಕ ನನ್ನ ಕೈ ಸೇರಿದೆ ನವೆಂಬರ್ 20ರಿಂದ ನಾಟಕ ಪ್ರದರ್ಶನ ಪ್ರಾರಂಭವಾಗಲಿದೆ ನ್ಯಾಯಾಲಯಕ್ಕೆ PIL ಹಾಕುತ್ತೇವೆ ಎಲ್ಲಿ, ಯಾವಾಗ ಎಂಬುದನ್ನು ವಕೀಲರು ನೋಡಿಕೊಳ್ಳುತ್ತಾರೆ ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸುತ್ತೇವೆ ಎಂದಿದ್ದಾರೆ.
ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೋ ಅದೇ ಹೇಳುತ್ತಾರೆ ಪ್ರತಾಪ್ ಸಿಂಹ ದೃಷ್ಟಿಯಲ್ಲಿ ಅದು ಹೇಗೆ ಕಾಣುತ್ತಿದೆಯೋ ಗೊತ್ತಿಲ್ಲ ಗುಂಬಜ್ ರೀತಿ ಇದ್ದರೆ ಎಲ್ಲವನ್ನೂ ಹೊಡೆದು ಹಾಕುತ್ತಾರಾ..? ಬಸ್ ತಂಗುದಾಣ ನಿರ್ಮಾಣವಾಗಿರುವುದು ಸರ್ಕಾರದ ಹಣದಲ್ಲಿ ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು ಎಂಬುದು ನನಗೆ ಗೊತ್ತಿಲ್ಲ ಗುಂಬಜ್ ಮಾದರಿಯ ಬಸ್ ತಂಗುದಾಣ ಹೊಡೆದು ಹಾಕೋದಾದ್ರೆ, ಅದೆಷ್ಟು ತಂಗುದಾಣ ಹೊಡೆದು ಹಾಕುತ್ತಾರೋ ಹೊಡೆದು ಹಾಕಲಿ ನಾವು ಅದನ್ನು ನೋಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
