ನವದೆಹಲಿ: ಮೇ.28: ಪ್ರಧಾನಿ ನರೇಂದ್ರ ಮೋದಿ ಅವರು ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸರ್ವಧರ್ಮ ಪಾರ್ಥನೆಯು ವಿಶೇಷವಾಗಿ ಗಮನ ಸೆಳೆಯಿತು. ಹೊಸ ಸಂಸತ್ ಭವನ ಉದ್ಘಟನಾ ಕಾರ್ಯಕ್ರಮ ಮುಂಜಾನೆಯಿಂದಲೇ ಆರಂಭವಾಯಿತು. ಐತಿಹಾಸಿ ಸೆಂಗೋಲ್ ಅನ್ನು ( ರಾಜದಂಡ) ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಪೂಜಾ-ವಿಧಿವಿಧಾನಗಳ ಜತೆಗೆ, ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ದೇಶಕ್ಕೆ ಸಾರಿದರು.
ಭಾರತದ ಸಂಸತ್ತಿನ ನೂತನ ಕಟ್ಟಡವು ಉದ್ಘಾಟನೆಗೊಳ್ಳುತ್ತಿದ್ದಂತೆ, ನಮ್ಮ ಹೃದಯ, ಮನಸ್ಸು ಹೆಮ್ಮೆ, ಭರವಸೆ ಮತ್ತು ಭರವಸೆಯಿಂದ ತುಂಬಿವೆ. ಈ ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಿರಲಿ, ಕನಸುಗಳನ್ನು ಹೊತ್ತಿಸಿ ಅವುಗಳನ್ನು ವಾಸ್ತವಕ್ಕೆ ಪೋಷಿಸುತ್ತದೆ. ಇದು ನಮ್ಮ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ನೂತನ ಸಂಸತ್ ಭವನದ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.