ಬೇಸಿಗೆಯ (summer) ಬೇಗೆ, ಬಿಸಿಲಿನ ತಾಪದಿಂದ ಕಂಗೆಟ್ಟುಹೋಗಿದ್ದ ಬೆಂಗಳೂರು (Bangalore)ಸೇರಿದಂತೆ ಒಂದಷ್ಟು ದಕ್ಷಿಣ ಕರ್ನಾಟಕದ (South karnataka) ಒಂದಷ್ಟು ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಿ, ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದ್ರೆ, ಉತ್ತರ ಕರ್ನಾಟಕ (North karnataka) ಭಾಗದ ಕೆಲ ಜಿಲ್ಲೆಗಳಲ್ಲಿ ಇನ್ನೂ ಊಹಿಸಲೂ ಅಸಾಧ್ಯವಾದ ಬೇಸಿಗೆಯ ಬಿಸಿ ತಟ್ಟಿದೆ.
ಬಿಸಿಲಿನ ತಾಪಕ್ಕೆ ಯಾದಗಿರಿ (yadagiri) ಜನತೆ ಕಂಗೆಟ್ಟಿದ್ದು, ಜಿಲ್ಲೆಯಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗೂ (44 degree) ಅಧಿಕ ತಾಪಮಾನ ದಾಖಲಾಗಿದೆ. ಈ ಪರಿಯ ತಾಪಮಾನದಿಂದ ಜನ ಮನೆಯಿಂದ ಹೊರಬರಲು ಹೆದರುವಂತಾಗಿದೆ. ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಲೆ ಮೇಲೆ ಕೈ ವಸ್ತ್ರ, ಟವೆಲ್ ಹಾಕಿಕೊಂಡು ಜನರು ಓಡಾಡ್ತಿದ್ದಾರೆ.
ಅಧಿಕ ಬಿಸಿಲಿನ ತಾಪಮಾನಕ್ಕೆ ಜಿಲ್ಲೆಯ ಜನರು ಥಂಡಾ ಹೊಡೆದಿದ್ದು, ಮಧ್ಯಾಹ್ನದ ಹೊತ್ತಲ್ಲಿ ಜನರಿಲ್ಲದೇ ರಸ್ತೆಗಳು ಬಿಕೋ ಅನ್ನುತ್ತಿವೆ. ಅಧಿಕ ತಾಪಮಾನ ದಾಖಲಾದ್ರೂ ರಸ್ತೆಗೆ ನೀರು ಸಿಂಪಡಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಒಮ್ಮೊ ಬೇಸಿಗೆ ಕಳೆದರೆ ಸಾಕಪ್ಪ ಅಂತ ಜನ ಕಂಗಾಲಾಗಿದ್ದಾರೆ.