ಪೆನ್‌ಡ್ರೈವ್ (Pendrive case) ಹಂಚಿಕೆ ಆರೋಪದಡಿ ಪ್ರಜ್ವಲ್ ರೇವಣ್ಣ (Prajwal revanna) ವಿರುದ್ಧ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ಪ್ರಜ್ವಲ್, ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಪ್ರೀತಂಗೌಡ (Preetham gowda) ಕೂಡ ಪ್ರಕರಣದ ಆರೋಪಿ ಅಂತಾ ಉಲ್ಲೇಖಿಸಿಲಾಗಿದೆ. ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ (Cyber crime) ಪ್ರಕರಣ ದಾಖಲಾಗಿದ್ದು, ಎಸ್‌ಐಟಿ (SIT) ಟೀಮ್ ಪ್ರೀತಂ ಗೌಡಗೂ ನೋಟಿಸ್ ನೀಡೋ ಸಾಧ್ಯತೆ ಇದೆ.
ಇನ್ನೂ ಎಫ್‌ಐಆರ್ ದಾಖಲಾಗಿರೋ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಪ್ರೀತಂ ಗೌಡ ಹಿಂದೇಟು ಹಾಕಿದ್ರು. ಪ್ರಕರಣ ದಾಖಲಾದ ಬಗ್ಗೆ ನನಗೆ ಗೊತ್ತಿಲ್ಲ. ತಿಳ್ಕೊಂಡು ಬಂದು ಮತ್ತೆ ಮಾತಾಡೇನೆ ಅಂತ ಸರಿಯಾಗಿ ಪ್ರತಿಕ್ರಿಯಿಸದೇ ಬೆಂಗಳೂರಿನ ಬಿಜೆಪಿ ಕಚೇರಿಯಿಂದ ತೆರಳಿದ್ರು.
ಇನ್ನೂ ಈ ಬಗ್ಗೆ ಮಾಜಿ ಡಿಸಿಎಂ ಅಶ್ವತ್ ನಾರಾಯಣ್ (Ashwath narayan) ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದ್ರು ಕಾನೂನು ಕ್ರಮ ಆಗುತ್ತೆ. ಯಾರ ಮೇಲೆ FIR ಆಗಿದೆ ಅಂತ ನಮಗೇನು ಗೊತ್ತಿಲ್ಲ. ಅದನ್ನು SIT ನೋಡಿಕೊಳ್ಳುತ್ತೆ. ಇದರ ಬಗ್ಗೆ ಸಿಎಂ, ಡಿಸಿಎಂ ಹಾಗೂ ಹೋಮ್ ಮಿನಿಸ್ಟರ್ ಮಾತನಾಡಬೇಕು. ಕಾನೂನು ಎಲ್ಲರಿಗೂ ಅನ್ವಯ ಆಗುತ್ತೆ ಅಂತ ಹೇಳಿದ್ರು.