• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ತೆರಿಗೆ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ : ಡಿಕೆ ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
April 3, 2022
in ಕರ್ನಾಟಕ
0
ಬಿಜೆಪಿಗರು ನಮ್ಮ ಸಂವಿಧಾನವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ : ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ADVERTISEMENT

‘ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಎಲ್ಲ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದೆ. ನಾವು ಕೇವಲ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲದ ವಿಚಾರವಾಗಿ ಮಾತನಾಡುತ್ತಿದ್ದು, ಕಳೆದ 11 ದಿನಗಳಿಂದ ಇವುಗಳ ಬೆಲೆ ಏರುತ್ತಲೇ ಇದೆ.
ಚುನಾವಣೆ ಫಲಿತಾಂಶ ಬಳಿಕ ಇದು ನಿರಂತರವಾಗಿದೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತನಾಡಿ, ರೈತರು, ಬಡವರು, ವ್ಯಾಪಾರಸ್ಥರು, ಮಧ್ಯಮ ವರ್ಗದವರು, ಸಾಮಾನ್ಯ ಜನರ ಮೇಲೆ ಈ ಗದಾಪ್ರಹಾರ ನಡೆದುಕೊಂಡು ಬಂದಿದೆ. ತೆರಿಗೆ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಅಚ್ಛೇದಿನದ ಮಾತು ಕೊಟ್ಟಿದ್ದ ಮೋದಿ ಅವರು ಬೆಲೆ ಏರಿಕೆಯಿಂದ ನಿತ್ಯ ನರಕಯಾತನೆ ನೀಡುತ್ತಿದ್ದಾರೆ.

ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮೋದಿ, ವೆಚ್ಚವನ್ನು ಮಾತ್ರ ಡಬಲ್ ಮಾಡಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಮ್ಮ ರಾಜ್ಯದಿಂದ ಕೇಂದ್ರ ಕೃಷಿ ಸಚಿವರಿದ್ದರೂ ರಾಗಿ, ಭತ್ತ, ಜೋಳ, ತೊಗರಿ ಬೆಂಬಲ ಬೆಲೆ ನೀಡುತ್ತಿಲ್ಲ. ಖರೀದಿಯಲ್ಲೂ ಮಿತಿ ಹೇರಿದ್ದಾರೆ.

50 ಕೆ.ಜಿಯ DAP ರಸಗೊಬ್ಬರ ಚೀಲದ ಬೆಲೆ 150 ರೂ. ಹೆಚ್ಚಾಗಿದ್ದು, ಅದರ ಬೆಲೆ 1350 ರೂ. ಆಗಿದೆ. ಇನ್ನು ಚೀಲಕ್ಕೆ ಹೆಚ್ಚುವರಿಯಾಗಿ 3 ರೂ. ದರ ಏರಿಸಲಾಗಿದೆ. ದೇಶದ ರೈತರು 1.20 ಕೋಟಿ ಟನ್ ಗಳಷ್ಟು DAP ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರೈತರ ಮೇಲೆ ಹೆಚ್ಚುವರಿಯಾಗಿ 3600 ಕೋಟಿ ರೂ. ಹೊರೆ ಬೀಳಲಿದೆ.

ಕೃಷಿ ಮೇಲೂ ತೆರಿಗೆ ವಿಧಿಸಿರುವುದು ಮೋದಿ ಅವರ ಸರ್ಕಾರದ ಮತ್ತೊಂದು ಸಾಧನೆ. ರಸಗೊಬ್ಬರದ ಮೇಲೆ ಶೇ. 5ರಷ್ಟು, ಕಳೆನಾಶಕದ ಮೇಲೆ ಶೇ.18ರಷ್ಟು, ಟ್ರ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಲಾಗಿದೆ.

ಮೋದಿ ಹಾಗೂ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ಕಳೆದ ವಾರದಿಂದ ಡೀಸೆಲ್ ಬೆಲೆಯನ್ನು 8.00 ರೂ. ಏರಿಕೆ ಮಾಡಿದೆ. ಸಗಟು ಡೀಸೆಲ್ ವ್ಯಾಪಾರದಲ್ಲಿ 25 ರೂ. ಹೆಚ್ಚಳ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ 9.20 ರೂ ಹಾಗೂ ಡೀಸೆಲ್ ಮೇಲೆ 3.46 ರೂ.ನಷ್ಟು ಅಬಕಾರಿ ಸುಂಕ ಇತ್ತು.

ಕಳೆದ ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ವಿಧಿಸಿದೆ. ಪೆಟ್ರೋಲ್ ಮೇಲೆ ಶೇ.203 ರಷ್ಟು ಹಾಗೂ ಡೀಸೆಲ್ ಮೇಲೆ ಬರೋಬ್ಬರಿ ಶೇ. 531 ರಷ್ಟು ಸುಂಕ ಹೆಚ್ಚಳ.

ಇದರಿಂದ ಒಂದು ವಿಚಾರ ಸ್ಪಷ್ಟ. ಈ ಬೆಲೆ ಏರಿಕೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಿಂದಲ್ಲ, ಮೋದಿ ಸರ್ಕಾರದ ದುರಾಸೆಯಿಂದಾಗಿದೆ.

ಮೋದಿ ಅವರ ಸರ್ಕಾರ ಕಳೆದ 8 ವರ್ಷಗಳಲ್ಲಿ ಪೆಟ್ರೊಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ಸಂಗ್ರಹಿಸಿದೆ.

ಕಳೆದ ಎರಡು ವರ್ಷದಲ್ಲಿ ಕೋವಿಡ್ ಸಂಕಷ್ಟದ ನಡುವೆ ಬಿಜೆಪಿಯ ಸುಲಿಗೆ ಮಾತ್ರ ನಿಂತಿಲ್ಲ, ಬದಲಿಗೆ ವಿಸ್ತರಿಸಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ ಕಚ್ಛಾ ತೈಲದ ಬೆಲೆಗಿಂತ ಈಗ ಸಾಕಷ್ಟು ಕಡಿಮೆ ಇದ್ದರೂ, ಇಂಧನ ದರ ಮಾತ್ರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಯುಪಿಎ ಅವಧಿಯಲ್ಲಿ ಕಚ್ಛಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 108 ಡಾಲರ್ ಇತ್ತು. ಆಗ ಪ್ರತಿ ಲೀಟರ್ ಪೆಟ್ರೋಲ್ 71.41 ಹಾಗೂ ಡೀಸೆಲ್ 55.49 ರೂ. ಇತ್ತು.

ಇಂದು ಕೂಡ ಕಚ್ಚಾತೈಲ ಬೆಲೆ ಅಷ್ಟೇ ಪ್ರಮಾಣದಲ್ಲಿ ಇದೆಯಾದರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108 ಹಾಗೂ ಡೀಸೆಲ್ 92 ರೂ. ಆಗಿವೆ.

ಆ ಮೂಲಕ ಬಿಜೆಪಿ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 37 ಹಾಗೂ ಡೀಸೆಲ್ 36.45 ರೂ.ನಷ್ಟು ಹೆಚ್ಚುವರಿ ದರ ವಸೂಲಿ ಮಾಡುತ್ತಿದೆ.

ಇನ್ನು ಅಡುಗೆ ಅನಿಲದ ಬೆಲೆ ವಿಚಾರಕ್ಕೆ ಬಂದರೆ ಸರ್ಕಾರ ಅಲ್ಲೂ ಸುಲಿಗೆ ಮುಂದುವರಿಸಿ ಜನರನ್ನು ಕಾಡುತ್ತಿದೆ. ಈ ವಿಚಾರವಾಗಿ ಮಹಿಳೆಯರನ್ನು ಕೇಳಿದರೆ ಗೊತ್ತಾಗುತ್ತಾದೆ. ಹೀಗಾಗಿ ನಾವು ಇತ್ತೀಚೆಗೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಈ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ. ಜನರ ಹಿತ ಕಾಯುವುದಕ್ಕೆ ಕಾಂಗ್ರೆಸ್ ಪಕ್ಷ ಇದೆ. ಕೆಲವು ರಾಜ್ಯಗಳಲ್ಲಿ ಹಿನ್ನಡೆಯಾದ ಮಾತ್ರಕ್ಕೆ ನಾವು ಧೃತಿಗೆಡುವ ಅಗತ್ಯವಿಲ್ಲ. ನಾವು ಜನರ ಪರವಾಗಿ, ಅವರ ಸಮಸ್ಯೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ ಜನರಿಗೆ ತಿಳುವಳಿಕೆ ಕೊಟ್ಟು ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ.

ಬೆಲೆ ಏರಿಕೆ ನಿಲ್ಲಿಸಿ ಯುಪಿಎ ಅವಧಿಯಲ್ಲಿ ಹೇಗೆ ಬೆಲೆ ನಿಯಂತ್ರಿಸಲು ಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತೋ ಅದೇ ರೀತಿ ಈಗಲೂ ಮಾಡಬೇಕು. ಈ ಸರ್ಕಾರ ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡುತ್ತಿದೆ.

ಕಬ್ಬಿಣದ ಬೆಲೆ 90 ಸಾವಿರ ಆಗಿದೆ, ಸೀಮೆಂಟ್ 480 ರೂ. ಆಗಿದೆ. ಅಡುಗೆ ಎಣ್ಣೆಯಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ.ಗೊಬ್ಬರ ಹಾಗೂ ಇಂಧನ ತೈಲ ಬೆಲೆ ಪ್ರಮುಖ ವಿಚಾರವಾಗಿದೆ. ಜನರ ಆದಾಯ ಪಾತಳಕ್ಕೆ ಕುಸಿದರೆ, ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಈ ವಿಚಾರವಾಗಿ ರಾಜ್ಯದುದ್ದಗಲಕ್ಕೆ ನಾವು ಹೋರಾಟ ಕಾರ್ಯಕ್ರಮ ರೂಪಿಸುತ್ತಿದ್ದೇವೆ.’

ರೈತರ ಪರಿಸ್ಥಿತಿ ಕೇಳುವಂತಿಲ್ಲ. ಅವರನ್ನೂ ಶೋಷಣೆ ಮಾಡಲಾಗುತ್ತಿದೆ.

ದಾಖಲೆಯ 63 ಲಕ್ಷ ಸದಸ್ಯತ್ವ

ಕಾಂಗ್ರೆಸ್ ಸದಸ್ಯತ್ವ ನೋಂದಣಿ 63 ಲಕ್ಷ ದಾಖಲೆ ಮಟ್ಟದಲ್ಲಿ ಆಗಿದೆ. ನೋಂದಣಿ ಅವಧಿಯನ್ನು ಏಪ್ರಿಲ್ 14 ರವರೆಗೆ ವಿಸ್ತರಿಸಲಾಗಿದೆ. ನೈಜ ಸದಸ್ಯತ್ವಕ್ಕೆ ಒತ್ತು ಕೊಡಲಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆಗೆ ಉದ್ಯಮಿ ಅಸಮಾಧಾನ: ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

Next Post

ರಾಜಧಾನಿಯಲ್ಲಿ ತಲೆ ಎತ್ತಲ್ಲಿದೆ ಬೃಹತ್ ICC : 90 ಕೋಟ ವೆಚ್ಚದಲ್ಲಿ ಸ್ಥಾಪನೆ!

Related Posts

Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
0

ಸಮರ್ಪಕ ವಿದ್ಯುತ್ ಪೂರೈಕೆಗೆ ಈಗಾಗಲೇ 100 ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸೂಕ್ತ ಜಾಗ ನೀಡಿದರೆ ಇನ್ನಷ್ಟು ಸಬ್‌ಸ್ಟೇಷನ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ...

Read moreDetails

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
Next Post
ರಾಜಧಾನಿಯಲ್ಲಿ ತಲೆ ಎತ್ತಲ್ಲಿದೆ ಬೃಹತ್ ICC : 90 ಕೋಟ ವೆಚ್ಚದಲ್ಲಿ ಸ್ಥಾಪನೆ!

ರಾಜಧಾನಿಯಲ್ಲಿ ತಲೆ ಎತ್ತಲ್ಲಿದೆ ಬೃಹತ್ ICC : 90 ಕೋಟ ವೆಚ್ಚದಲ್ಲಿ ಸ್ಥಾಪನೆ!

Please login to join discussion

Recent News

Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?
Top Story

ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?

by ಪ್ರತಿಧ್ವನಿ
November 3, 2025
ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
Top Story

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada