• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

ಶಿವಮೊಗ್ಗದಲ್ಲಿ ಜೂನ್‌ ತಿಂಗಳಿನಲ್ಲೇ ಬಿರುಸುಗೊಂಡ ಮಳೆ ; ಕೃಷಿಕರಲ್ಲಿ ಹುರುಪು

ಪ್ರತಿಧ್ವನಿ by ಪ್ರತಿಧ್ವನಿ
June 28, 2024
in ಜೀವನದ ಶೈಲಿ, ವಾಣಿಜ್ಯ, ವಿಶೇಷ, ಸರ್ಕಾರಿ ಗೆಜೆಟ್
0
ಶಿವಮೊಗ್ಗದಲ್ಲಿ ಜೂನ್‌ ತಿಂಗಳಿನಲ್ಲೇ ಬಿರುಸುಗೊಂಡ ಮಳೆ ; ಕೃಷಿಕರಲ್ಲಿ ಹುರುಪು
Share on WhatsAppShare on FacebookShare on Telegram

ಶಿವಮೊಗ್ಗ ;ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಭಾರಿ ಜೂನ್ ತಿಂಗಳಿನಲ್ಲಿಯೇ ಮಳೆಗಾಲ ಆರಂಭಗೊಂಡಿರುವುದು ಕೃಷಿಕರಲ್ಲಿ ಹುರುಪು ಮೂಡಿಸಿದೆ. ಆದರೆ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ ಆಗುತಿದ್ದು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ.
ಇಲ್ಲಿ ಮಳೆಯು ಸಾಮಾನ್ಯವಾಗಿ ಜುಲೈ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಬರುತ್ತಿದೆ. ಈ ಬಾರಿ ಮಳೆ ಜೂನ್​ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಂದು ಮಳೆಯ ಬಗ್ಗೆ ಭರವಸೆಯನ್ನು ಮೂಡಿಸಿದೆ. ಜೂನ್​ನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆ 472 ಎಂಎಂ ಮಳೆಯಾಗಬೇಕು. ಆದರೆ ಇದುವರೆಗೂ ಆಗಿದ್ದು ಕೇವಲ 166 ಎಂ.ಎಂ. ಮಾತ್ರ.
ಹವಾಮಾನ ಇಲಾಖೆ ವರದಿಯಂತೆ 2023 ಜೂನ್​ನಲ್ಲಿ ಶೇ.9ರಷ್ಟು ಮಳೆ ಕೊರತೆ ಇತ್ತು. ಜುಲೈನಲ್ಲಿ ಶೇ.13ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್​ನಲ್ಲಿ ಶೇ.36ರಷ್ಟು ಮಳೆ ಕೊರತೆ. ಸೆಪ್ಟೆಂಬರ್​​ನಲ್ಲಿ ಶೇ.13 ರಷ್ಟು‌ ಮಳೆ ಅಧಿಕವಾಗಿ ಬಂದಿತ್ತು. ಹೀಗೆ ಮಳೆ ಏರುಪೇರು ಆಗುತ್ತಿದೆ.

ADVERTISEMENT

ಲಿಂಗನಮಕ್ಕಿ ಜಲಾಶಯದ ಒಳಹರಿವು 16,984 ಕ್ಯುಸೆಕ್‌ಗೆ ಏರಿಕೆಯಾಗಿದೆ. ಬುಧವಾರ ಒಳಹರಿವು 9,033 ಕ್ಯುಸೆಕ್‌ ಇತ್ತು. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ 24 ಗಂಟೆಯಲ್ಲಿ 7,900 ಕ್ಯುಸೆಕ್‌ನಷ್ಟು ಒಳಹರಿವು ಹೆಚ್ಚಳಗೊಂಡಿದೆ. 1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 1,747.60 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,740.20 ಅಡಿ ನೀರಿನ ಸಂಗ್ರಹ ಇತ್ತು.
ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಈ ವರ್ಷದ ಮಳೆಗಾಲದಲ್ಲಿ ರಾಜ್ಯದಲ್ಲಿ ಮೊದಲು ಭರ್ತಿಯಾದ ಜಲಾಶಯ ಇದಾಗಿದೆ. ‘3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಜಲಾಶಯಕ್ಕೆ ಒಳಹರಿವು 6,766 ಕ್ಯುಸೆಕ್ ಇದೆ. ಎರಡು ಕ್ರೆಸ್ಟ್ ಗೇಟ್‌ಗಳನ್ನು ತೆರೆದು 5,285 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಉಳಿದ ಹೆಚ್ಚುವರಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ’ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.
ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಳಗೊಂಡಿದೆ.

Tags: 000 a month from organic farmingAgricultureagriculture departmentShivamogga
Previous Post

ಸಂಸದ ಒವೈಸಿ ಯ ದೆಹಲಿ ನಿವಾಸದ ನಾಮಫಲಕಕ್ಕೆ ಅಪರಿಚಿತರಿಂದ ಮಸಿ

Next Post

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಆರ್‌ಎಸ್‌ಎಸ್‌ ಪಧಾದಿಕಾರಿಗಳ ಬದಲಾವಣೆ

Related Posts

ಇಂಧನ ಇಲಾಖೆಯ ಎಲ್ಲಾ ಎಸ್ಕಾಂಗಳ ಲೈನ್ ಮ್ಯಾನ್ ಗಳು ಕಡ್ಡಾಯ ಸಮವಸ್ತ್ರ,ಗುರುತಿನ ಚೀಟಿ ಧರಿಸಲು ಆದೇಶ
Top Story

ಇಂಧನ ಇಲಾಖೆಯ ಎಲ್ಲಾ ಎಸ್ಕಾಂಗಳ ಲೈನ್ ಮ್ಯಾನ್ ಗಳು ಕಡ್ಡಾಯ ಸಮವಸ್ತ್ರ,ಗುರುತಿನ ಚೀಟಿ ಧರಿಸಲು ಆದೇಶ

by ಪ್ರತಿಧ್ವನಿ
May 18, 2026
0

ಬೆಂಗಳೂರು : ರಾಜ್ಯದ ಇಂಧನ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲಾ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಮೀಟರ್ ರೀಡರ್, ಲೈನ್ ಮ್ಯಾನ್‌ಗಳು ಕರ್ತವ್ಯದ ಸಮಯದಲ್ಲಿ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳು...

Read moreDetails
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

May 9, 2026
Next Post
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಆರ್‌ಎಸ್‌ಎಸ್‌ ಪಧಾದಿಕಾರಿಗಳ ಬದಲಾವಣೆ

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಆರ್‌ಎಸ್‌ಎಸ್‌ ಪಧಾದಿಕಾರಿಗಳ ಬದಲಾವಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!