
ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರ್ ಗೇಟ್ ಓವರ್ ಬ್ರಿಡ್ಜ್ ದಾಟುವ ಸಂದರ್ಭದಲ್ಲಿ ಆಳಂದ-ಸೋಲಾಪೂರ-ಪುಣೆ ಬಸ್ ಸೇರಿದಂತೆ ಬಸ್ ಚಾಲಕನ ಮುಖಕ್ಕೆ ಕೆಲ ಪುಂಡರು ಕಪ್ಪು ಮಸಿ ಬಳಿದು ಉದ್ದಟತನ ಮೆರೆದಿರುವ ಘಟನೆ (ಮಂಗಳವಾರ) ರಾತ್ರಿ ನಡೆದಿದೆ.

ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಕಂಡಕ್ಟರ್ ಮೇಲೆ ಮರಾಠಿ ಪ್ರಯಾಣಿಕರೊಂದಿಗೆ ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆದಿತ್ತು. ಆದರೆ ಇದೀಗ ಮತ್ತೆ ಕೆಲ ಪುಂಡರು ಕರ್ನಾಟಕದ ಬಸ್ಸುಗಳನ್ನು ಗುರಿಯಾಗಿಸಿ ಪುಣೆಯ ಸ್ವಾರ್ ಗೇಟ್ ಬ್ರಿಡ್ಜ್ ದಾಟುವಾಗ ಬಸ್ ಅನ್ನು ನಿಲ್ಲಿಸಿ, ಚಾಲಕನನ್ನು ಕೆಳಗೆ ಇಳಿಸಿ ಬಸ್ಸಿಗೆ ಹಾಗೂ ಡ್ರೈವರ್ ಮುಖಕ್ಕೆ ಕಪ್ಪು ಮಸಿ ಬಳಿದು ಬಸ್ಸಿನ ಮೇಲೆ ‘ಜೈ ಮಹಾರಾಷ್ಟ್ರ(Jai Maharashtra)’, ‘ಜೈ ಮರಾಠಿ'(‘Jai Marathi’)ಎಂದು ಬರೆದಿದ್ದಾರೆ.

ಅಲ್ಲದೇ ನೀವುಕರ್ನಾಟಕದವರು ಮರಾಠಿಗರನ್ನು ಕೆಣಕಬೇಡಿ, ನಾವು ಪುಂಡರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಹಾಗೂ ನಮ್ಮ ತಂಟೆಗೆ ಬರಬೇಡಿ, ನಮ್ಮವರಿಗೆ ಕರ್ನಾಟಕದಲ್ಲಿ ಏನಾದರೂ ಮಾಡಿದರೆ ನಿಮಗೆ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ .. ಘಟನೆಯ ಕುರಿತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದ ಬಸ್ ಚಾಲಕ ಸಾದಿಕ್.

ನಿಮ್ಮ ಸರಕಾರಕ್ಕೆ ಹೇಳಿ, ಬೇಷರತ್ತಾಗಿ ಮರಾಠಿಗರ ಬಳಿ ಕ್ಷಮೆ ಕೇಳಿ ಎಂದು ಬಸ್ ಚಾಲಕ ಸಾದೀಕ ಮುಲಗೆ ಪಡಸಾವಳಿ ಅವರಿಗೆ ಧಮ್ಮಿ ಹಾಕಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
