ಕೇರಳದ (Kerala) ಕಾಸರಗೋಡಿನಲ್ಲಿ (Kasaragodu) ಮತ್ತೆ ಲವ್ ಜಿಹಾದ್ (Love jihad) ಸದ್ದು ಮಾಡಿದೆ. ಕಾಸರಗೋಡಿನ ಬದಿಯಡ್ಕದಲ್ಲಿ ಮೇ.23ರಂದು ಮನೆಯಿಂದ ಹೊರಟ ನೇಹಾ (Neha) ದಿಢೀರ್ ನಾಪತ್ತೆಯಾಗಿದ್ದು, ಈ ಬಗ್ಗೆ ನೇಹಾಳ ತಂದೆ ದೂರಿನಲ್ಲಿ ಯುವತಿಯ ಅಪಹರಣದ ಅನುಮಾನ ವ್ಯಕ್ತಪಡಿಸಿದ್ರು.

ಆದ್ರೆ ಇದೀಗ ನಾಪತ್ತೆಯಾಗಿದ್ದ ಯುವತಿ ನೇಹಾ ಅನ್ಯಮತೀಯ ಯುವಕನಾದ ಮಿರ್ಶಾದ್ (Mirshad) ಜೊತೆ ಮದುವೆಯಾಗಿ ಠಾಣೆಗೆ ಹಾಜರಾಗಿದ್ದು, ಸ್ವಇಚ್ಛೆಯಂತೆ ಯುವಕನ ಜೊತೆ ತೆರಳಿದ್ದಾಗಿ ಹೇಳಿದ್ದಾಳೆ. ಸದ್ಯ ಇಬ್ಬರನ್ನ ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಇನ್ನು ಇದ್ರಿಂದಾಗಿ ಸಿಟ್ಟಿಗೆದ್ದ ವಿಶ್ವ ಹಿಂದೂ ಪರಿಷತ್ (VHP) ಮುಸ್ಲಿಂ ಲೀಗ್ (Muslim leauge) ನೇತಾರನೋರ್ವ ಆರ್ಥಿಕವಾಗಿ ಹಿಂದುಳಿದ ಮತ್ತು ಆಡಂಬರದ ಬದುಕಿನ ಆಮಿಷ ತೋರಿಸಿ ಹಿಂದೂ ಯುವತಿಯರನ್ನ ಲವ್ ಜಿಹಾದ್‌ನ ಜಾಲಕ್ಕೆ ಸಿಲುಕಿಸಿದ್ದಾರೆ ಹಾಗೂ ಇದಕ್ಕೆ ಬದಿಯಡ್ಕ ಪೊಲೀಸರು (Police) ಸಾಥ್ ನೀಡ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು.