ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka swamy murder case) ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್ (Darshan & gang) ಜೈಲು ಕಂಬಿ ಎಣಿಸುತ್ತಿದೆ. ಇಷ್ಟು ದಿನ ಅಂತರ ಕಾಯ್ದುಕೊಂಡಿದ್ದ ಪತ್ನಿ ವಿಜಯಲಕ್ಷ್ಮಿ (Vijayalakshmi) ಮತ್ತು ಪುತ್ರ ವಿನೀಶ್ ಜೈಲಿಗೆ ಕೊನೆಗೂ ಭೇಟಿ ಕೊಟ್ಟಿದ್ದಾರೆ.
12 ದಿನಗಳ ಪೊಲೀಸ್ ಕಸ್ಟಡಿ ಇದೀಗ ಮೂರು ದಿನಗಳ ಜೈಲುವಾಸ ಕಂಡಿರುವ ನಟ ಆರೋಪಿ ದರ್ಶನ್ (Actir darshan) ಪತ್ನಿ ಮತ್ತು ಮಗನನ್ನು ಕಂಡೊಡನೆ ಗಳಗಳನೆ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪತ್ನಿ ಹಾಗೂ ಪುತ್ರನನ್ನ ಕಂಡೊಡನೆ ದರ್ಶನ್ ಭಾವುಕರಾಗಿ ಪುತ್ರನನ್ನ ಬಾಚಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ನಂತರ ಈ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಪೊಲೀಸ್ ಠಾಣೆಗೂ ದರ್ಶನ್ ರನ್ನ ನೋಡಲು ಭೇಟಿ ಕೊಟ್ಟಿರಲಿಲ್ಲ. ಆದರೆ ಇದೀಗ ಪತಿ ದರ್ಶನ್ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.