ನಟ ನಿರ್ದೇಶಕ ರಕ್ಷಿತ್ ಶೆಟ್ಟಿಗೆ (Actor Rakshith Shetty) ಬಂಧನದ ಭೀತಿ ಶುರುವಾಗಿದೆ. ಹೀಗಾಗಿ ರಕ್ಷಿತ್ ಶೆಟ್ಟಿ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ (Sessions court) ಮೊರೆ ಹೋಗಿದ್ದಾರೆ.ಸಿಆರ್ಪಿಸಿ 438 ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ರಕ್ಷಿತ್ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ.

ಸದ್ಯ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸಿಸಿಎಚ್ 61 ಕೋರ್ಟ್,ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪಿಪಿಯಿ (PPE) ನ್ಯಾಯಾಲಯಕ್ಕೆ ಸಮಯಕ್ ಕೋರಿದ್ದಾರೆ. ಈ ಮನವಿ ಪುರಸ್ಕರಿದ ನ್ಯಾಯಧೀಶರಾದ ಪ್ರಕಾಶ್ ಸಂಗಪ್ಪ ಹೆಚ್,ಅರ್ಜಿಯ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ ಮಾಡಿ ಆದೇಶಿಸಿದ್ದಾರೆ.

ಕಾಪಿ ರೈಟ್ಸ್ (Copyright) ಉಲ್ಲಂಘನೆ ಆರೋಪದಲ್ಲಿ ಸದ್ಯ ರಕ್ಷಿತ್ ಶೆಟ್ಟಿ ಮೇಲೆ ಎಫ್ ಐ ಆರ್ (FIR) ದಾಖಲಾಗಿದೆ. ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪವಿದ್ದು, ತನ್ನ ಬ್ಯಾಚಲರ್ಸ್ ಪಾರ್ಟಿ (Bachelor party) ಸಿನಿಮಾಗಾಗಿ ಅನಧಿಕೃತವಾಗಿ ಬಳಸಲಾಗಿದ್ದು,MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು.ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಕೇಸ್ ದಾಖಲು ಮಾಡಲಾಗಿತ್ತು