• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಾಂಸ್ಕೃತಿಕ ಸೂಕ್ಷ್ಮ ಇಲ್ಲದ ಅಳ್ವಿಕೆಯಲ್ಲಿ ,,,,,,,,,!

ಪ್ರತಿಧ್ವನಿ by ಪ್ರತಿಧ್ವನಿ
August 13, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ರಂಗಾಯಣ ನಿರ್ದೇಶಕರ ನೇಮಕದಲ್ಲಿ ಅಧಿಕಾರಶಾಹಿಯ ಛಾಯೆ ಎದ್ದು ಕಾಣುವಂತಿದೆ

ADVERTISEMENT

 “ ಮಣ್ಣಿನ ವಾಸನೆ ಅರಿಯದವರು ಬೇಸಾಯ ಮಾಡಲಾರರು/ಬಾರದು ” ಇದು ದಾರ್ಶನಿಕ ಸತ್ಯ. ಹಾಗೊಮ್ಮೆ ದುಸ್ಸಾಹಸ ಮಾಡಿದವರಿಗೂ ಸಹ ʼ ಕಳೆ ʼ ಮತ್ತು ʼ ಬೆಳೆ ʼಯ ನಡುವೆ ವ್ಯತ್ಯಾಸ ಅರಿವಾಗದೆ ಹೋಗಬಹುದು. ಸಂಸ್ಕೃತಿ ಅಥವಾ ಸಾಂಸ್ಕೃತಿಕ ಜಗತ್ತು ಒಂದು ರೀತಿಯಲ್ಲಿ ಇಳೆಗೆ ಸಮಾನವಾದುದು. ಕೃಷಿ ಪ್ರಪಂಚದೊಳಗೆ ಪ್ರವೇಶಿಸುವ ಮುನ್ನ ಮಣ್ಣಿನ ಗುಣ ಪರಿಚಯ ಇರುವುದಷ್ಟೇ ಅಲ್ಲ ಇಳೆಯೊಡಲಿನ ಅಂತರ್‌ ಸೂಕ್ಷ್ಮಗಳ ಪರಿವೆ-ಪರಿಜ್ಞಾನವೂ ಇರುವುದು ಮುಖ್ಯ. ಹಾಗೆಯೇ ಸಾಂಸ್ಕೃತಿಕ ಪ್ರಪಂಚದ ಮುಖ್ಯ ಭೂಮಿಕೆಗಳನ್ನು ನಿರ್ವಹಿಸುವವರಿಗೆ ಸುತ್ತಲಿನ ಸಮಾಜದ ಒಳಸೂಕ್ಷ್ಮಗಳು ಹಾಗೂ ನೆಲೆಗಾಣುವ ನೆಲದ ಸಾಂಸ್ಕೃತಿಕ ಸಂವೇದನೆಯ ಪರಿಚಯವೂ ಇರಬೇಕಾಗುತ್ತದೆ.  ಇದು ಸಾಂಸ್ಕೃತಿಕ ಜಗತ್ತಿನ ವಿಶಾಲ ಹರವಿನುದ್ದಕ್ಕೂ ಅನ್ವಯಿಸುವುದಾದರೂ, ವಿಶೇಷವಾಗಿ ರಂಗಭೂಮಿಗೆ ಹೆಚ್ಚು ಆಪ್ತತೆಯಿಂದ ಅನ್ವಯಿಸುತ್ತದೆ.

 ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದ ನಂತರ ರಂಗಾಯಣಗಳಿಗೆ ಕಾಯಕಲ್ಪ ಒದಗಿಸುವ ಯೋಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಕರ್ನಾಟಕದ ರಂಗಭೂಮಿಗೆ ಒಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿ, ಅಂತಾರಾಷ್ಟ್ರೀಯ ಮನ್ನಣೆ ಗಳಿಸುವುದರಲ್ಲಿ ಸಫಲವಾಗಿರುವ ರಂಗಾಯಣದಂತಹ ಸಾಂಸ್ಕೃತಿಕ ಸಂಸ್ಥೆಗೆ ಕಾಯಕಲ್ಪ ನೀಡುವುದೆಂದರೆ ಏನು ? ಆಯ್ಕೆ ಪ್ರಕ್ರಿಯೆಯಲ್ಲಿ ಈ ಅರಿವು ಮಿಸ್‌ ಆಗಿದೆ ಎನಿಸುತ್ತದೆ. ಮೈಸೂರು ರಂಗಾಯಣ ಕಳೆದ ಹಲವು ವರ್ಷಗಳಲ್ಲಿ ಎದುರಿಸಿದ ಜಟಿಲ ಸವಾಲುಗಳು ಮತ್ತು ಸಂಕೀರ್ಣ ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಸಾಂಸ್ಥಿಕವಾಗಿ ಸಂಪೂರ್ಣ ದುರಸ್ತಿ ಮಾಡಬೇಕಾದ ಸನ್ನಿವೇಶ ಇರುವುದು ಎಲ್ಲರಿಗೂ ತಿಳಿದ ಸತ್ಯ. ಹಿಂದಿನ ನಿರ್ದೇಶಕರು ಮಾಡಿದ ಅವಾಂತರಗಳು ಮತ್ತು ಎಬ್ಬಿಸಿದ ರಾಡಿಯನ್ನು ಸ್ವಚ್ಚಗೊಳಿಸುವುದೇ ಒಂದು ದೊಡ್ಡ ಕಾಯಕ ಎನ್ನುವುದೂ ಅಷ್ಟೇ ಸತ್ಯ.

 ಮೇಲಾಗಿ ರಂಗಾಯಣ ಎಂಬ ಸಂಸ್ಥೆ ಒಂದು Stage Management ಅಥವಾ Event Management ಮಾಡುವ ವೇದಿಕೆಯಲ್ಲ, ಅಲ್ಲವೇ ? ವಿವಿಧ ತಂಡಗಳಿಂದ ನಾಟಕಗಳನ್ನು ಆಡಿಸುವುದು ಅದಕ್ಕೆ ಬೇಕಾದ Logistics ಒದಗಿಸುವುದು ಅಥವಾ ವರ್ಷಕ್ಕೊಮ್ಮೆ ಬಹುರೂಪಿ ಹೆಸರಿನಲ್ಲಿ ಜಾತ್ರೆ ನಡೆಸುವುದು, ಇದಷ್ಟೇ ರಂಗಾಯಣದ ಆದ್ಯತೆಯಲ್ಲ. ಇದಕ್ಕೂ ಮೀರಿದ ಸಾಂಸ್ಕೃತಿಕ ಜವಾಬ್ದಾರಿ, ರಂಗಪ್ರಜ್ಞೆಯ ಅರಿವು ಹಾಗೂ ಸ್ಥಳೀಯ ಸಾಂಸ್ಕೃತಿಕ ಸೂಕ್ಷ್ಮಗಳ ಪರಿಜ್ಞಾನ ಬಹಳ ಮುಖ್ಯವಾಗುತ್ತದೆ. ಮೈಸೂರು ಸಾಂಸ್ಕೃತಿಕ ನಗರಿ ಎಂದು ಹೆಸರು ಪಡೆದಿರುವುದು ಕೇವಲ ಶಾಸ್ತ್ರೀಯ ಸಂಗೀತ, ವಾಗ್ಗೇಯಕಾರರು, ಸಾಹಿತಿಗಳಿಂದ ಮಾತ್ರ ಅಲ್ಲ. ಕಳೆದ 35 ವರ್ಷಗಳ ರಂಗಾಯಣದ ಪಯಣವೂ ಈ ಕೀರ್ತಿಗೆ ಕಾರಣವಾಗಿದೆ. ರಂಗಭೂಮಿಯ ಚಟುವಟಿಕೆಗಳಿಗೆ ಕೇವಲ ಅಮೂಲ್ಯ ನಾಟಕಗಳನ್ನು ನೀಡಿರುವುದಷ್ಟೇ ಅಲ್ಲದೆ ನೂರಾರು ರಂಗಕರ್ಮಿಗಳನ್ನು ಮೈಸೂರು ರಂಗಾಯಣ ನೀಡಿದೆ.

 ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಗೆ ತಮ್ಮ ತನುಮನ ಅರ್ಪಿಸಿ ಸಮಾಜದೊಡನೆ ಬೆರೆತು, ಇಲ್ಲಿನ ಸಾಂಸ್ಕೃತಿಕ ಮನಸುಗಳೊಡನೆ ನಿರಂತರ ಒಡನಾಟ ಇಟ್ಟುಕೊಂಡು, ರಂಗಕಲೆಯನ್ನು ವಿಶಾಲ ಸಮಾಜದ ಸಾಂಸ್ಕೃತಿಕ ಭಾಗವನ್ನಾಗಿ ಮಾಡಿರುವುದು ರಂಗಾಯಣ ಮತ್ತು ಅಲ್ಲಿ ದುಡಿಯುತ್ತಿರುವ, ದುಡಿದು ನಿವೃತ್ತರಾಗಿರುವ, ಅದರೊಡನೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಸಾಂಸ್ಕೃತಿಕ ಮನಸುಗಳ ಕೊಡುಗೆ. ಅಷ್ಟೇ ಅಲ್ಲದೆ ರಂಗಾಯಣದ ನಿವೃತ್ತ ಕಲಾವಿದರು ತಮ್ಮ ರಂಗಪ್ರಜ್ಞೆಯನ್ನು ಸವೆಯಲು ಅವಕಾಶವನ್ನೇ ನೀಡದೆ ಇಂದಿಗೂ ಸಹ ರಂಗ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಂಗ ಚಟುವಟಿಕೆ ಎಂದರೆ ಕೇವಲ ನಟನೆ, ನಿರ್ದೇಶನ ಮಾತ್ರವಲ್ಲದೆ, ಸಮಾಜದ ಒಳಸುಳಿಗಳನ್ನು ಭೇದಿಸಿ, ಸಮಕಾಲೀನ ಯುಗದಲ್ಲಿ ಯುವ ಸಮಾಜಕ್ಕೆ ಅಗತ್ಯವಾದ ಚಾರಿತ್ರಿಕ-ಸಾಂಸ್ಕೃತಿಕ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

 ವಾಕ್-ಶ್ರವಣ-ದೃಶ್ಯ ಕಲೆಗಳ ಸಮ್ಮಿಳಿತ ವಿಶಾಲ ಸಾಗರ ರಂಗಭೂಮಿ. ಇದನ್ನು ಪೋಷಿಸಿ ಕಟ್ಟುವ ಕಾಯಕದಲ್ಲಿ ತೊಡಗಿರುವ ಮೈಸೂರು ರಂಗಾಯಣ ಸಂಸ್ಥೆಯನ್ನು ನಿರ್ದೇಶಿಸುವವರಲ್ಲಿ ಬಿ. ವಿ. ಕಾರಂತರು ಹುಟ್ಟುಹಾಕಿದ ಈ ಸಂಸ್ಥೆಯ ಮೂಲ ಆಶಯಗಳು ಸದಾ ಜಾಗೃತಾವಸ್ಥೆಯಲ್ಲಿರಬೇಕು. ಸ್ಥಳೀಯ ಸಾಂಸ್ಕೃತಿಕ ಚಿಂತನಾವಾಹಿನಿಗಳ ಅರಿವು ಮತ್ತು ಒಡನಾಟ ಇರಬೇಕು. ಇಂತಹ ಸಂಸ್ಥೆಗೆ ಅಧಿಕಾರಶಾಹಿ ಮಾದರಿಯಲ್ಲಿ ಎಲ್ಲಿಂದಲೋ, ಯಾರನ್ನೋ ತಂದು ಪೀಠದಲ್ಲಿ ಕೂರಿಸುವುದು ಸಾಂಸ್ಕೃತಿಕ ಜಗತ್ತಿಗೆ ಮಾಡಿದ ಅಪಚಾರ ಎಂದೇ ಹೇಳಬಹುದು. ಮೈಸೂರು ರಂಗಾಯಣ ಇಂತಹ ಒಂದು ದುಸ್ಸಾಹಸದ ಅಡ್ಡ ಪರಿಣಾಮಗಳನ್ನು ಹಿಂದಿನ ನಿರ್ದೇಶಕರ ಅವಧಿಯಲ್ಲಿ ಅನುಭವಿಸಿದೆ. ಹೀಗಿದ್ದರೂ ನಿರ್ದೇಶಕರ ನೇಮಕದಲ್ಲಿ ರಂಗಾಯಣದಲ್ಲೇ ತಮ್ಮ ಬದುಕು ಸವೆಸಿರುವ ಒಬ್ಬ ರಂಗಕರ್ಮಿಗೂ ಅವಕಾಶ ಸಿಗದೆ ಇರುವುದು ಸರ್ಕಾರದ-ಸಂಸ್ಕೃತಿ ಸಚಿವಾಲಯದ ಅಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ.

 ರಂಗಾಯಣ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲು ಬೇಕಾದ ಬದ್ಧತೆ-ಕ್ಷಮತೆ ಹೊಂದಿರುವ ನಿವೃತ್ತ ರಂಗಾಯಣ ಕಲಾವಿದರನ್ನು, ಹವ್ಯಾಸಿ ರಂಗಕರ್ಮಿಗಳನ್ನು ಅಲಕ್ಷ್ಯ ಮಾಡಿರುವುದು ಸರ್ವಥಾ ಸಾಧುವಲ್ಲ. ಸಂವೇದನಾಶೀಲ ಸಾಂಸ್ಕೃತಿಕ ವಲಯವನ್ನು ಅಧಿಕಾರಶಾಹಿಯ ಮಾದರಿಯಲ್ಲಿ ನಿರ್ವಹಿಸುವ ಸರ್ಕಾರದ ಧೋರಣೆ ಖಂಡನಾರ್ಹ.

-೦-೦-೦-೦-

Tags: Congress PartyNaa Divakararangayanaಸಿದ್ದರಾಮಯ್ಯ
Previous Post

HMT ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರಕಾರಕ್ಕೆ ವಾಪಸ್ ಕೊಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ ಸಚಿವರು

Next Post

ಅರಣ್ಯ ಇಲಾಖೆ ಸಚಿವರೊಂದಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸಮಾಲೋಚನೆ..

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post

ಅರಣ್ಯ ಇಲಾಖೆ ಸಚಿವರೊಂದಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸಮಾಲೋಚನೆ..

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada