ಲೋಕಸಭೆ ಚುನಾವಣೆಗೆ ಉತ್ತಮ ಸಮನ್ವಯ ಮತ್ತು ನಿರ್ವಹಣೆ ಮಾಡುವ ಉದ್ದೇಶದಿಂದ ಅಮೃತಸರ, ಗುರುದಾಸ್‌ಪುರ ಮತ್ತು ಜಲಂಧರ್ ಸಂಸದೀಯ ಕ್ಷೇತ್ರಗಳಿಗೆ ಎಐಸಿಸಿಯಿಂದ ವಿಶೇಷ ವೀಕ್ಷಕರಾಗಿ ಗೌರವಾನ್ವಿತ ಇಂಧನ ಸಚಿವ ಶ್ರೀ ಕೆಜೆ ಜಾರ್ಜ್ ಅವರನ್ನು ನೇಮಿಸಲಾಗಿದೆ.

ಇದೇ ರೀತಿ ಮಾಣಿಕಾಂ ಟ್ಯಾಗೂರ್, ಗಿರೀಶ್ ಚೊಡಂಕರ್, ಜಿತು ಪಟವಾರಿ, ಮಲ್ಲು ಭಟ್ಟಿ ವಿಕ್ರಮಾರ್ಕ, ನಿತಿನ್ ರಾವತ್, ಸುನಿಲ್ ಕೇದಾರ್ ಅವರನ್ನು ನೇಮಕ ಮಾಡಿ ಎಐಸಿಸಿ ಪರವಾಗಿ ಕೆ.ಸಿ ವೇಣುಗೋಪಾಲನ್ ಆದೇಶ ಮಾಡಿದ್ದಾರೆ. ಕರ್ನಾಟಕದಿಂದ ಜಾರ್ಜ್ ಅವರನ್ನು ಮಾತ್ರ ಆಯ್ಕೆ ಮಾಡಲಾಗಿದೆ.








