ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ದೇಹದಲ್ಲಿ ಸಣ್ಣಪುಟ್ಟ ಸೋಂಕುಗಳು ಮತ್ತು ಕಾಯಿಲೆಗಳು ಕಾಡುತ್ತದೆ. ಅದರಲ್ಲೂ ಕೂಡ ಮಳೆಗಾಲದಲ್ಲಿ ಹವಮಾನ ಬದಲಾಗುತ್ತಿದ್ದಂತೆ ಜ್ವರ, ಶೀತ, ಕೆಮ್ಮು ,ನೆಗಡಿ ಇಂತಹ ಕಾಯಿಗಳು ಬರುವುದು ಸಹಜ.. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೋಗಗಳು ಹೆಚ್ಚುತ್ತಿದೆ ಇಂಥ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಮುಖ್ಯ ಕೆಲಸ. ಹಾಗಾಗಿ ಈ ಮನೆಮದ್ದುಗಳನ್ನ ಬಳಸುವುದರಿಂದ ಸುಲಭ ವಾಗಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಬಹುದು..

ಅಮೃತ ಬಳ್ಳಿ
ಇದನ್ನು ಆಯುರ್ವೇದದಲ್ಲಿ ಹೆಚ್ಚು ಬಳಸಲಾಗಿದ್ದು ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಅದರಲ್ಲೂ ಕೂಡ ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಪ್ರಮುಖ ಕಾರ್ಯವನ್ನು ವಹಿಸುತ್ತದೆ. ಅಮೃತಬಳ್ಳಿಯ ಜ್ಯೂಸ್ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ವಾರಕ್ಕೆ ಒಂದು ಅಥವಾ ಎದ್ದುಬಾರಿಯಾದರೂ ಈ ಜ್ಯೂಸ್ ಅನ್ನ ಸೇವಿಸುವುದು ಉತ್ತಮ. ಅಲ್ಲದೆ ಅಮೃತಬಳ್ಳಿಯಿಂದ ತಯಾರಿಸಿದ ಕೆಲವೊಂದು ಮಾತ್ರೆಗಳು ಕೂಡ ಲಭ್ಯವಿದೆ ಅವುಗಳನ್ನು ಸೇವಿಸುವುದು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅರಿಶಿಣ
ಅರಿಶಿಣದಲ್ಲಿ ಸಾಕಷ್ಟು ಔಷಧಿ ಅಂಶಗಳು ಇವೆ. ಅರಿಶಿಣವು ಕಕ್ಯುರ್ಕಮಿನ್ ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕವನ್ನ ಹೊಂದಿದೆ. ಇದು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿ ದಿನ ಅಡುಗೆಯಲ್ಲಿ ಅರಿಶಿನವನ್ನು ಬಳಸುವುದರಿಂದ ಇದರಲ್ಲಿರುವ ಆಂಟಿಬಯೋಟಿಕ್ ಗುಣಗಳು ನಮ್ಮ ದೇಹಕ್ಕೆ ಸೇರುತ್ತದೆ. ಅರಿಶಿನವನ್ನು ಬೆರೆಸಿ ಸೇವಿಸುವುದರಿಂದ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.

ಬೆಳ್ಳುಳ್ಳಿ
ಹಸಿ ಬೆಳ್ಳುಳ್ಳಿಯನ್ನ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಥವಾ ಆಹಾರದಲ್ಲಿ ಬೆಳ್ಳಿಯನ್ನು ಬೆರೆಸುವುದು ಕೂಡ ಉತ್ತಮ ಬೆಳ್ಳುಳ್ಳಿಯಿಂದ ಹೊಟ್ಟೆಗೆ ಸಂಬಂದಿಸಿದ ಹಲವಾರು ಕಾಯಿಲೆಗಳು ನಿವಾರಣೆಯಾಗುತ್ತದೆ.. ಹಾಗೂ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ರೋಗ ನಿರೋಧಕ ಶಕ್ತಿಯನ್ನ ಜಾಸ್ತಿ ಮಾಡುತ್ತದೆ.

ಶುಂಠಿ
ಶುಂಠಿ ಸಾಕಷ್ಟು ಕಾಯಿಲೆಗಳಿಗೆ ಔಷಧಿಯಾಗಿದ್ದು ಆಯುರ್ವೇದದಲ್ಲಿ ಹಿಂದಿನ ಕಾಲದಿಂದಲೂ ಇದನ್ನ ಬಳಸಲಾಗಿದೆ ಶುಂಠಿ ಉರಿಯುತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ಯುಮಿನಿಟಿ ಪವರ್ ಅನ್ನು ಹೆಚ್ಚು ಮಾಡುತ್ತದೆ. ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ಶುಂಠಿ ಟೀ ಅಥವಾ ಶುಂಠಿ ರಸವನ್ನ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬೇಕಾದಲ್ಲಿ ಜೇನುತುಪ್ಪವನ್ನು ಕೂಡ ಆಡ್ ಮಾಡಿಕೊಳ್ಳಬಹುದು.
