ಈಗಾಗಲೇ ತಮಿಳುನಾಡಿನಲ್ಲಿ (Tamilnadu) ಮೊದಲ ಹಂತದ ಚುನಾವಣೆ ಮುಗಿದಿದ್ದು, ಅಣ್ಣಾಮಲೈ (annamalai) ಚುನಾವಣೆಗೆ ನಿಂತಿದ್ದ ಕ್ಷೇತ್ರದ ಚುನಾವಣೆಯೂ ಮುಗಿದಿದೆ. ಸದ್ಯ ಇದೀಗ ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲೈ ದಿನಗಳು ಬಾಕಿಯಿದ್ದು, ರಾಜ್ಯ ಬಿಜೆಪಿ(8jp) ನಾಯಕರು ಅಣ್ಣಾಮಲೈರನ್ನ ಬೆಂಗಳೂರಲ್ಲಿ ಮತಬೇಟೆಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಲ್ಲಿ ಅಣ್ಣಾಮಲೈ ತಮಿಳಿನಲ್ಲಿ (Tamil) ಪ್ರಚಾರಕ್ಕಿಳಿದಿರೋದು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು ಕೇಂದ್ರ (Bangalore central) ಮತ್ತು ಬೆಂಗಳೂರು ದಕ್ಷಿಣ (Bangalore South) ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಣ್ಣಾಮಲೈ ಪ್ರಾಚಾರಕ್ಕಿಳಿದ್ದಾರೆ. ಪ್ರಮುಖವಾಗಿ ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ತಮಿಳಿಗರು ವಾಸವಿರೋದ್ರಿಂದ, ಅವರ ಮತಗಳೇ ಬಹುಪಾಲಿದೆ. ಹೀಗಾಗಿ ತಮಿಳಿಯನ್ನರ ಮತಗಳನ್ನ ಗುರಿಯಾಗಿಸಿಕೊಂಡು ಅಣ್ಣಾಮೈಲೈ ಪ್ರಚಾರಕ್ಕಿಳಿದಿದ್ದಾರೆ.
ಬೆಂಗಲೂರಿನಲ್ಲಿ (Bangalore) ನೆಲೆಸಿರುವ ತಮಿಳಿಗರ ಮತವನ್ನ ಬಿಜೆಪಿಗೆ ಸೆಳೆಯಲು ಅಣ್ಣಾಮಲೈ ತಮಿಳಿನಲ್ಲೇ ಮತಯಾಚನೆ ಮಾಡಿದ್ದಾರೆ. ಈ ಹಿಂದೆ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಮಡಿದ್ದ ಅಣ್ಣಾಮಲೈ, ಇದೀಗ ಬಿಜೆಪಿಯ ಫೈಯರ್ ಬ್ಯಾಂಡ್ (Fire brand) ಆಗಿ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲಿ ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಕ್ಷೇತ್ರಗಳ ತಮಿಳಿಗರ ಮತಗಳನ್ನ ಸೆಳೆಯಲು ಬಿಜೆಪಿ ಈ ಪ್ಲಾನ್ ಮಾಡಿದ್ದು, ತಮಿಳಿಗರ ಮತಬುಟ್ಟಿಗೆ ಅಣ್ಣಾಮಲೈ ಕೈಹಾಕಿದ್ದಾರೆ.