ಬೆಂಗಳೂರು (Bangalore) ಲೋಕಸಭಾ ಕ್ಷೇತ್ರಗಳ ಕದನದ ಕಾವು ಹೆಚ್ಚಾಗಿದೆ. ಶತಾಯ ಗತಾಯ ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳನ್ನ ವಶಪಡಿಸಿಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳು ಪಣತೊಟ್ಟಿವೆ. ಹೀಗಾಗಿ ಕಾಂಗ್ರೆಸ್(congress) ಮತ್ತು ಬಿಜೆಪಿ (BJP)ಪ್ರಚಾರದ ಭರಾಟೆ ಜೋರಾಗಿದ್ದು, ರಾಷ್ಟ್ರೀಯ ನಾಯಕರನ್ನು ಕರೆಸಿ ಮತಬೇಟೆ ಮುಂದುವರೆಸಿದೆ. ಒಂದೇ ದಿನ ರಾಜಧಾನಿ ಬೆಂಗಳೂರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka gandhi) ಮತ್ತು ಬಿಜೆಪಿ ವರಿಷ್ಠ ಅಮಿತ್ ಶಾ ಎಂಟ್ರಿ ಕೊಟ್ಟಿದರೆ.

ಚಿತ್ರದುರ್ಗದ (chitradurga) ಪ್ರಚಾರ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ (priyanka gandhi) ಬೆಂಗಳೂರಲ್ಲಿ ಮೋದಿ (modi) ಮತ್ತು ಬಿಜೆಪಿ ವಿರುದ್ಧ ಗುಡುಗಿದ್ರು. ಮತ್ತೊಂದ್ಕಡೆ ಕೇರಳಕ್ಕೆ ಹೊರಡಬೇಕಿದ್ದ ಅಮಿತ್ ಶಾ (Amit sha) ರಾಜ್ಯಕ್ಕೆ ಭೇಟಿ ಕೊಟ್ಟು ಬೆಂಗಳೂರು ದಕ್ಷಿಣ (Bangalore south) ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ರು. ಬೆಂಗಳೂರಿಗರ ಮತಕ್ಕಾಗಿ ಇಬ್ಬರು ರಾಷ್ಟ್ರೀಯ ನಾಯಕರು ಬೀದಿಗಿಳಿದಿದ್ದು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ (Ramalinga reddy) ಅವರ ಮಗಳು ಸೌಮ್ಯ ರೆಡ್ಡಿ (sowmya reddy) ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ (Tejaswi soorya) ಕೊಂಚ ಆತಂಕ ಎದುರಾಗಿದೆ. ಈ ಕಾರಣಕ್ಕೆ ಘಟಾನುಘಟಿ ನಾಯಕರನ್ನೇ ಕ್ಷೇತ್ರಕ್ಕೆ ಕರೆತಂದು ಪ್ರಚಾರ ಕೈಗೊಂಡಿದ್ದಾರೆ. ನೆನ್ನೆ ಅಣ್ಣಾಮಲೈ , ಇಂದು ಅಮಿತ್ ಶಾ ತೇಜಸ್ವಿ ಪರವಾಗಿ ಮತಯಾಚಿಸಿದ್ದಾರೆ.