ಟಿಕೆಟ್ (ticket) ಕೈತಪ್ಪಿದ ಹಿನ್ನಲೆ ಬಾಗಲಕೋಟೆ (bagalakot) ಕಾಂಗ್ರೆಸ್ (congress) ಬಣದಲ್ಲಿ ಅಸಮಾಧಾನ ಭುಗಿಲೇಳು ಎಲ್ಲಾ ಲಕ್ಷಣ ಕಂಡುಬರ್ತಿದೆ. ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ (veena kaashappanavar) ನೇತೃತ್ವದಲ್ಲಿ ನಾಳೆ ಬಾಗಲಕೋಟೆಯಲ್ಲಿ ಬೆಂಬಲಿರು ಹಾಗೂ ಹಿತೈಷಿಗಳ ಸಭೆ ಕರೆಯಲಾಗಿದೆ. ಬಾಗಲಕೋಟೆ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದೆ.
ಸಭೆಯಲ್ಲಿ ವೀಣಾ ಕಾಶಪ್ಪನವರ (veena kaashappanavar) ಬೆಂಬಲಿಗರ ಬಳಿ ತಮ್ಮ ಟಿಕೆಟ್ ಕೈ ತಪ್ಪಿದರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಕೇಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (MP Election) ಬಂಡಾಯವಾಗಿ ಸ್ಪರ್ಧಿಸಬೇಕಾ, ಅಥವಾ ಪಕ್ಷದ ನಿರ್ಧಾರವನ್ನ ಗೌರವಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸಬೇಕಾ ಎಂದು ಈ ಸಭೆಯಲ್ಲಿ ವ್ಯಕ್ತವಾಗುವ ಅನಿಸಿಕೆಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಸಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ (congress candidate) ಕಣಕ್ಕಿಳಿದು ಪರಾಭವಗೊಂಡಿದ್ದ ವೀಣಾ ಕಾಶಪ್ಪನವರ (veena kaashappanavar) ಈ ಬಾರಿ ತಮಗೆ ಟಿಕೆಟ್ ದೊರೆಯುತ್ತೆ ಎನ್ನುವ ಆಶಾಭಾವನೆಯಲ್ಲಿ ಆರಂಭದಿಂದಲೇ ಕ್ಷೇತ್ರದಲ್ಲಿ ಆಕ್ಟಿವ್ (active) ಇದ್ದರು. ಆದ್ರೆ ಪಕ್ಕದ ವಿಜಯಪುರ ಜಿಲ್ಲೆಯ (vijayapura) ಪ್ರಭಾವಿ ರಾಜಕಾರಣಿ ಶಿವಾನಂದ ಪಾಟೀಲ (Shivananda patil) ಪುತ್ರಿ ಸಂಯುಕ್ತಾ (samyukta patil) ಪಾಟೀಲಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಹುತೇಕ ಪಕ್ಕಾ ಆಗಿದೆ. ಇದರಿಂದ ವೀಣಾ ಕಾಶಪ್ಪನವರ ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದ್ದು ಭಾರೀ ನಿರಾಸೆ ಮೂಡಿಸಿದ್ದು ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.