ಶ್ರೀನಗರ: ಈ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರ್ ನ ಭದ್ರತಾ ಪಡೆಗಳು 75 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿ ಆಗಿವೆ. ಸೇನಾ ಅಧಿಕಾರಿಗಳ ಪ್ರಕಾರ, ಈ 75 ಉಗ್ರರಲ್ಲಿ ಸುಮಾರು 60 ಪ್ರತಿಶತ ಪಾಕಿಸ್ಥಾನದವರಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಭಾರತೀಯ ಭದ್ರತಾ ಪಡೆ ಪ್ರತಿ ಐದು ದಿನಗಳಿಗೆ ಉಗ್ರನೊಬ್ಬನನ್ನು ಹತ್ಯೆ ಮಾಡುತಿದ್ದಾರೆ. ತಾವು ಹೊಡೆದುರುಳಿಸಿದ 75 ಉಗ್ರರಲ್ಲಿ ಹೆಚ್ಚಿನವರು ವಿದೇಶಿಯರು. ಈ ಗಣನೆಗೆ 17 ಮಂದಿ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಮಾಡುವ ಪ್ರಯತ್ನದಲ್ಲಿ, ಮತ್ತು 26 ಮಂದಿ ಆಂತರಿಕ ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದಾರೆ.
ಜಮ್ಮು ಪ್ರದೇಶದ ಐದು ಜಿಲ್ಲೆಗಳಾದ ಜಮ್ಮು, ಉಧಂಪುರ, ಕಥುವಾ, ದೋಡಾ ಮತ್ತು ರಾಜೌರಿಯಲ್ಲಿ 42 ಸ್ಥಳೀಯೇತರ ಉಗ್ರರು ಕೊಡ ಹತರಾಗಿದ್ದಾರೆ. ಈಗ ಬಾರಾಮುಲ್ಲಾ ಉಗ್ರರ ಚಟುವಟಿಕೆಗಳಿಗೆ ಹಾಟ್‌ಸ್ಪಾಟ್ ಆಗಿದ್ದು, ಒಂಬತ್ತು ಎನ್‌ಕೌಂಟರ್‌ಗಳಲ್ಲಿ 14 ಸ್ಥಳೀಯೇತರ ಸಾವು ದಾಖಲಾಗಿದೆ.
“ಸ್ಥಳೀಯ ಉಗ್ರರ ಗುಂಪು ಬಹುತೇಕ ನಿರ್ನಾಮವಾಗಿದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2024 ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 60 ಉಗ್ರ ಸಂಬಂಧಿತ ಘಟನೆಗಳನ್ನು ದಾಖಲಿಸಲಾಗಿದೆ, ಇದರಿಂದ 32 ನಾಗರಿಕರು ಮತ್ತು 26 ಭದ್ರತಾ ಪಡೆಗಳು ಸಾವಿಗೆ ಈಡಾಗಿದ್ದು , ಒಟ್ಟಾಗಿ 122 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.