ವಿವಿಧ ರಾಜ್ಯಗಳಲ್ಲಿ ನಡೆದ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೂ ಪ್ರಾಬಲ್ಯವನ್ನ ಮೆರೆದಿವೆ. ಇದರಲ್ಲಿ ಕಾಂಗ್ರೆಸ್ 8 ಸ್ಥಾನಗಳಲ್ಲಿ ಜಯಿಸಿದರೆ, ಬಿಜೆಪಿ 7ರಲ್ಲಿ ಜಯಿಸಿದೆ. ಮಿಕ್ಕಂತೆ ಪ್ರಾದೇಶಿಕ ಪಕ್ಷಗಳು 15 ಸ್ಥಾನಗಳಲ್ಲಿ ಗೆದ್ದು ತಮ್ಮ ಪ್ರಾಬಲ್ಯವನ್ನ ಮೆರೆದಿವೆ.
ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, 2022ರಲ್ಲಿ ಗಾಳಿ ಯಾವ ಕಡೆ ಬೀಸಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶದ ಕುರಿತು ಚಿದಂಬರಂ ಬಿಜೆಪಿ ಮತ್ತು ಅದರ, ಮಿತ್ರ ಪಕ್ಷಗಳು 7 ಸ್ಥಾನಗಳನ್ನು ಗೆದ್ದುಕೊಂಡಿವೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿದೆ ಮತ್ತು ಪ್ರಾದೇಶಿಕ ಪಕ್ಷಗಳು 15 ಸ್ಥಾನಗಳನ್ನು ಗೆದ್ದಿವೆ ಇದರಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ವೈಎಸ್ಆರ್ ಕಾಂಗ್ರೆಸ್ ಕೂಡ ಒಂದು ಎಂದು ಹೇಳಿದ್ದಾರೆ.

ಉಪಚುನಾವಣೆ ಪಲಿತಾಂಶ ಕುರಿತು ಮಂಗಳವಾರ ಸುದ್ದಿಘೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದರು. ದುರಹಂಕಾರವನ್ನ ಜನ ತೊಡೆದು ಹಾಕಿದ್ದಾರೆ ಇನ್ನಾದರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ ಮತ್ತು ಬೆಲೆ ಏರಿಕೆ ಮೂಲಕ ಜನರನ್ನು ಲೂಟಿ ಮಾಡುವುದ್ನು ಮೊದಲು ನಿಲ್ಲಿಸಿ ಎಂದು ವಾಗ್ದಾಳಿಯನ್ನ ನಡೆಸಿದೆ.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ಗೆಲುವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಗೆಲುವು ಮತ್ತು ದ್ವೇಷ ರಾಜಕಾರಣಧ ವಿರುದ್ದ ನಿರ್ಭಯವಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.
ಮುಂದಿನ ವರ್ಷ ಮಾರ್ಚ್ ವೇಳೆಗೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ನಲ್ಲಿ ವಿಧಾನಸಭೆ ಚುನಾವಣೇಗಳು ನಡೆಯಲಿವೆ. ಮುಂದಿನ ವರ್ಷದ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.






