ಮಧ್ಯರಾತ್ರಿಯಲ್ಲಿ ನಡೆದ ಹೈಡ್ರಾಮದ ಹೊರತಾಗಿಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಅಧಿಕಾರ ಕಳೆದುಕೊಂಡಿದ್ದಾರೆ.
ರಾಜಕಾರಣಿಯಾಗಿ ಬದಲಾದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸೋಲಿನಲ್ಲೂ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಇತಿಹಾಸದಲ್ಲೇ ವಿಶ್ವಾಸಮತ ಸಾಬೀತುಪಡಿಸದೇ ಅಧಿಕಾರ ಕಳೆದುಕೊಂಡ ಮೊದಲ ಪ್ರಧಾನಿ ಎಂದು ಇಮ್ರಾನ್ ಖಾನ್ ಅನಿಸಿಕೊಂಡಿದ್ದಾರೆ.
48 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಸುಪ್ರೀಂಕೋರ್ಟ್ ನೀಡಿದ ಸೂಚನೆ ಮೇರೆಗೆ ಶನಿವಾರ ಮಧ್ಯರಾತ್ರಿ ನಡೆದ ಹೈಡ್ರಾಮಾದಲ್ಲಿ ಇಮ್ರಾನ್ ಖಾನ್ 174 ಮತಗಳು ಇಮ್ರಾನ್ ಖಾನ್ ವಿರುದ್ಧ ಬಿದ್ದವು. 342 ಸದಸ್ಯ ಬಲದ ಸಂಸತ್ ನಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದರೆ ಇಮ್ರಾನ್ ಖಾನ್ 174 ಶಾಸಕರ ಬೆಂಬಲ ಪಡೆಯಬೇಕಿತ್ತು.