ಒಂದು ಕಡೆ ಬಗೆ ಬಗೆಯ ಮಾವು. ಮತ್ತೊಂದು ಕಡೆ ಹಣ್ಣುಗಳ ರಾಜ ಹಲಸಿನ ಹಣ್ಣು. ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಮಾವು ಹಲಸಿನ ಮೇಳಕ್ಕೆ ತೋಟಾಗಾರಿಕೆ ಇಲಾಖೆ ಇಂದು ಚಾಲನೆ ನೀಡಿದೆ. ವೈರೈಟಿ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣು ಕೊಳ್ಲಲು ಜನರು ಮುಗಿ ಬೀಳುತ್ತಿದ್ದಾರೆ.
ಸಸ್ಯಕಾಶಿ ಲಾಲ್ಬಾಗ್ ನಲ್ಲಿ ಮೂರು ವರ್ಷದ ಬಳಿಕ ಮತ್ತೆ ಮಾವು ಹಲಸಿನ ಮೇಳಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ ಮೇಳ ಶುರುವಾಗಿದ್ದು ಜೂನ್ 13ರ ವರೆಗೆ ಮೇಳ ನಡೆಲಿದೆ. ಇಂದು ತೋಟಾಗಾರಿಕೆ ಸಚಿವರಾದ ಮುನಿರತ್ನ ಅವ್ರು ಮಾವು ಮೇಳಕ್ಕೆ ಚಾಲನೆ ನೀಡಿದ್ದು ರೈತರು ನೇರವಾಗಿ ಮಾರಾಟ ಮಾಡಲು 105 ಮಳಿಗೆಗಳನ್ನ ಮಾಡಲಾಗಿದೆ. ರಾಜ್ಯದ ನಾನಾ ಕಡೆಯಿಂದ ರೈತರು ತಾವು ಬೆಳದಿರೋ ಮಾವು ಹಲಸಿನ ಹಣ್ಣನ್ನ ಇಲ್ಲಿ ಮಾರಾಟ ಮಾಡಬಹುದಾಗಿದ್ದು, ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗಧಿ ಮಾಡಿದೆ.
ಇನ್ನು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಗಲಿದೆ. ರೈತರು ತಾವು ಬೆಳದ ಮಾವು ಮತ್ತು ಹಲಸಿನ ಹಣ್ಣಿಗೆ ತೋಟಾಗಾರಿಕೆ ಇಲಾಖೆ ವೇದಿಕೆ ಸೃಷ್ಟಿ ಮಾಡಿದ್ದು ಲಾಲ್‌ಬಾಗ್ ನಲ್ಲಿ ಮುಂದಿನ 18 ದಿನ ಮಾವು ಹಲಸಿನ ಪರಿಮಳವೇ ಪ್ರವಾಸಿಗರನ್ನು ಹಾಗೂ ಸಿಲಿಕಾನ್ ಸಿಟಿ ಜನರನ್ನ ಸೆಳೆಯಲಿದೆ.

ಮೇಳದಲ್ಲಿ ಮಾವಿನ ದರ !
ಇಮಾಮ್ ಪಸಂದ್ – 200
ಮಲ್ಲಿಕಾ – 100
ಬಾದಾಮಿ – 100
ಸಕ್ಕರೆ ಗುತ್ತಿ – 150
ಸಿಂಧೂರ – 50
ರಸ್ಪುರಿ – 80
ದೆಸೇರಿ – 100
ಕಲಾಪಡ- 120
ಮಲ್ಗೋವಾ – 120
ತೋತಾಪುರಿ – 30
ಅಮರಪಾಲಿ – 100
ಬಗೆ ಬಗೆಯ ಮಾವಿನ ಹಣ್ಣು ಕೆಜಿಗೆ 32 ರಿಂದ ಶುರುವಾಗಿ 215 ರೂಪಾಯಿ ವರೆಗೆ ಇದೆ. ಹಲಸಿನ ಹಣ್ಣು ಕೆಜಿಗೆ 25 ರೂ ನಿಗಧಿಯಾಗಿದೆ. ಎಲ್ಲೋ ಕೆಮಿಕಲ್ ಮಿಕ್ಸ್ ಮಾಡಿ ಹಣ್ಣು ಮಾಡೋ ಹಣ್ಣುಗಳನ್ನ ತಿನ್ನೋ ಬದಲು ನೈಸರ್ಗಿಕವಾಗಿ ಹಣ್ಣಾಗಿರೋ ಮಾವು ಹಲಸನ್ನ ನೇರವಾಗಿ ರೈತರಿಂದಲೇ ಖರೀದಿಸಿ ತಿನ್ನಲು ಜನರು ಮುಗಿ ಬೀಳುತ್ತಿದ್ದಾರೆ. ಜನರ ಸ್ಪಂದನೆ ಹಾಗೂ ಬೇಡಿಕೆ ಹೆಚ್ಚಿದ್ದರೆ ಮೇಳ ಮತ್ತಷ್ಟು ದಿನಗಳ ಕಾಲ ಮುಂದುವರೆಯಲಿದೆ.
			
                                
                                
                                
