ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸಮಾವೇಶ ನಡೆಸಿದ್ದು, ಬುಧವಾರ ರಾತ್ರಿ ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡಿದ್ದಾರೆ. 1996 ರಿಂದ ಇಲ್ಲಿಗೆ 28 ವರ್ಷ ಗಳು ಕಳೆದಿವೆ. ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರ. ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದ ಕ್ಷೇತ್ರ ಇದು. ದೇವೇಗೌಡರ ಕಷ್ಟದ ದಿನಗಳಲ್ಲಿ ಆಶೀರ್ವಾದ ಮಾಡಿದ್ದು ಇದೇ ಕ್ಷೇತ್ರದ ಜನರು. ಕನಕಪುರ ವಿಧಾನಸಭಾ ಕ್ಷೇತ್ರ ಜನತಾದಳದ ಭದ್ರಕೋಟೆ. ಈ ಕ್ಷೇತ್ರವನ್ನ ಈ ತಾಲೂಕಿನ ಜನತೆ ಬೆಳೆಸಿದ್ರು, ಇಲ್ಲಿ ನಮಗೆ ಹಿನ್ನಡೆ ಆಗಿದ್ದು, ಕಾರ್ಯಕರ್ತರು, ಜನರಿಂದ ಅಲ್ಲ. ನನ್ನನ್ನೂ ಸೇರಿದಂತೆ ಕೆಲವು ಮುಖಂಡರಿಂದ ಎಂದಿದ್ದಾರೆ.

ಚನ್ನಪಟ್ಟಣದಲ್ಲೂ ಕಾರ್ಯಕರ್ತರನ್ನ ಕೊಂಡುಕೊಳ್ತಿದ್ದಾರೆ. ದೇವೇಗೌಡರು, ನನ್ನ ಬಗ್ಗೆಯೂ ಹಗುರವಾಗಿ ಮಾತನಾಡ್ತಿದ್ದಾರೆ. ಕನಕಪುರದ ನಮ್ಮ ಕಾರ್ಯಕರ್ತರಿಗೆ ನಮ್ಮಿಂದಲೇ ಅನ್ಯಾಯ ಆಗಿದೆ. ಅದಕ್ಕಾಗಿ ನಾನು ಎಲ್ಲರನ್ನೂ ಕ್ಷಮೆ ಕೇಳ್ತಿನಿ. ನಾನೂ ಎಂದೂ ಸಹ ಈ ಕ್ಷೇತ್ರದಲ್ಲಿ ರಾಜಿಗೆ ಒಳಗಾಗಿಲ್ಲ. ಈ ಮಹಾನುಭಾವರ ಜೊತೆ ನಾವು ರಾಜಿ ಮಾಡಿಕೊಂಡಿಲ್ಲ. ದೆಹಲಿಯ ಕರ್ನಾಟಕ ಭವನದಲ್ಲಿ ಆತ ಬಂದು ಕನಕಪುರಕ್ಕೆ ಕೈ ಹಾಕಬೇಡಿ ಅಂತ ಕೂತಿದ್ದ. ನಾನು ಹಿಂದೆ ಇದೇ ಸಾತನೂರು ಕ್ಷೇತ್ರದಿಂದ ಸೋತಿದ್ದೆ. ನಾನು ಎಲ್ಲೂ ಈ ಕ್ಷೇತ್ರದ ಜನತೆಗೆ ದ್ರೋಹ ಮಾಡಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಕನಕಪುರದ ಜನತೆ ಮುಂದೆ ದಯಾನಿಯವಾಗಿ ಬೇಡಿಕೊಂಡಿರುವ ಕುಮಾರಸ್ವಾಮಿ, ದಯಮಾಡಿ ನನ್ನ ಮೇಲೆ ಸಂಶಯಪಡಬೇಡಿ, ನೀವು ಇಲ್ಲಿ ಬಂದು ಸೇರಿರೋದ್ರಿಂದ ನಿಮಗೂ ಧಮ್ಕಿ ಹಾಕ್ತಾರೆ. ಮಧ್ಯರಾತ್ರಿ ಹೋಗಿ ನಿಮ್ಮ ಮನೆ ಬಾಗಿಲು ತಟ್ತಾರೆ. ಹಣ ಕೊಟ್ಟು ನಿಮ್ಮ ಮನೆ ಬಾಗಿಲ ಬಳಿ ಕೂರ್ತಾರೆ ಎಂದು ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಹೆಸರನ್ನು ಹೇಳದೆ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 2018ರಲ್ಲಿ ಕಾಂಗ್ರೆಸ್ ಜೊತೆ ನನಗೆ ಸರ್ಕಾರ ಮಾಡಲು ಇಷ್ಟ ಇರಲಿಲ್ಲ ಎಂದು ಜನರ ಎದುರು ಹೇಳಿಕೊಂಡಿದ್ದಾರೆ.

ದೇವೇಗೌಡರು ಹಿಂದೆ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಅವರ ರಾಜಕೀಯ ಜೀವನ ಹಾಳು ಮಾಡಿಕೊಂಡರು. ಅವರು ಸತತ 62 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಅಂತವರ ಬಗ್ಗೆ ಸಿಎಂ, ಡಿಸಿಎಂ ಹೇಳ್ತಾರೆ. ದೇವೇಗೌಡ ರನ್ನ ಪ್ರಧಾನ ಮಂತ್ರಿ ಮಾಡಿದ್ದು ಕಾಂಗ್ರೆಸ್ ಅಂತ. ಆದರೆ ದೇವೇಗೌಡರನ್ನ ಪ್ರಧಾನಿ ಮಾಡಿದ್ದು ನೀವಲ್ಲ, ಅವರನ್ನ 10 ತಿಂಗಳಿಗೆ ಪ್ರಧಾನಿ ಸ್ಥಾನದಿಂದ ಇಳಿಸಿದ್ದು ನೀವು. ಮೈತ್ರಿ ಅವಧಿಯಲ್ಲಿ ನನ್ನನ್ನು ಯಾವ ರೀತಿ ನಡೆಸಿಕೊಂಡ್ರಿ ಅನ್ನೋದು ಗೊತ್ತಿದೆ. ನನ್ನನ್ನು ಹೋಟೆಲ್ ಕಾರಿಡಾರ್ನಲ್ಲಿ ನಿಲ್ಲಿಸಿದ್ರು. ನಮ್ಮ ಶಾಸಕರು ಪಕ್ಷಬಿಟ್ಟು ಹೋಗಿದ್ದು ಯಾಕೆ..? ಇದೇ ಸಿದ್ದರಾಮಯ್ಯ ಪಾರ್ಲಿಮೆಂಟ್ ಚುನಾವಣೆ ಆಗುವವರೆಗೂ ಮಾತ್ರ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂದಿದ್ರು. ಆಮೇಲೆ ಕಿತ್ತು ಹಾಕ್ತೀವಿ ಅಂದ್ರು. ಇದು ಇವರು ನನ್ನ ನಡೆಸಿಕೊಂಡ ರೀತಿ ಎಂದು ತನಗಾದ ನೋವನ್ನು ಬಿಚ್ಚಿಟ್ಟಿದ್ದಾರೆ.
ಸಂಗಮದಿಂದ ಪಾದಯಾತ್ರೆ ಮಾಡಿದ್ರಲ್ಲ ಏನಾಯ್ತು..? ನಮ್ಮ ನೀರು, ನಮ್ಮ ಹಕ್ಕು ಅಂದ್ರಲ್ಲ ಏನಾಯ್ತು..? ಮೇಕೆದಾಟು ಕಟ್ಟಿದ್ರಾ.? ಮೋದಿ ಹತ್ರ ಚೆನ್ನಾಗಿದ್ದಾರೆ ಕುಮಾರಸ್ವಾಮಿ, ಅನುಮತಿ ಕೊಡಿಸಲಿ ಅಂತೀರಲ್ಲ, ನೀವ್ಯಾಕೆ ಪಾದಯಾತ್ರೆ ಮಾಡಿದ್ರಿ, ಜಾತ್ರೆ ಮಾಡಿದ್ರಿ..? ಪಾದಯಾತ್ರೆ ವೇಳೆ ಊರಿಗೆಲ್ಲ ಲೈಟ್ ಹಾಕಿದ್ಯಲ್ಲ..? ನನ್ನ ಒಳ್ಳೆ ಸ್ನೇಹಿತ ಅಂತೆ. ಪಾಪ ಒಳ್ಳೆಯ ಸ್ನೇಹಿತ ಆಗಿದ್ರೆ ಬೆನ್ನಿಗೆ ಚೂರಿ ಹಾಕ್ತಿದ್ರಾ..? ನಿಖಿಲ್ ಕುಮಾರಸ್ವಾಮಿ ಸೋಲಿಸಿದ್ದು ಯಾರು. ನಮ್ಮ ಭದ್ರಕೋಟೆಗೆ ಬಿಲ ತೋಡಿದ್ದು ಯಾರು..? ನನ್ನ ಮಗನಿಗೆ ನೀವು ಬೆನ್ನಿಗೆ ಚೂರಿ ಹಾಕಿದ್ರಿ.. ಆ ಕೆಲಸ ನಾನು ಮಾಡಿದ್ರೆ 2019ರಲ್ಲಿ ಡಿ.ಕೆ.ಸುರೇಶ್ ಎಂಪಿ ಅಗ್ತಿರಲಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಕಾಲಚಕ್ರ ಉರುಳುತ್ತಿದೆ ಎಂದು ಸ್ವಕ್ಷೇತ್ರದಿಂದ ಸಂದೇಶ ರವಾನಿಸಿದ್ದಾರೆ.
ಕೃಷ್ಣಮಣಿ