ನಿನ್ನೆ ಬೆಳಗಾವಿಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ಸಿಎಂ ಭಾಷಣದ ವೇಳೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ (Dk Shivakumar) ಬಿಜೆಪಿ ನಾಯಕರಿಗೆ ವಾರ್ನಿಂಗ್ ಕೊಟ್ಟ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಾಯಕರೆಲ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ.ಇನ್ನು ನೀವು ನಮಗೇನು ಎಚ್ಚರಿಕೆ ಕೊಡ್ತೀರಾ..? ಎಂದು ಕುಟುಕಿದ್ದಾರೆ. ನೇಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾಗಾಂಧಿ (Sonia gandhi), ರಾಹುಲ್‌ಗಾಂಧಿ, ED ಕೇಸ್ ನಲ್ಲಿ ಡಿಕೆಶಿ, ಇನ್ನು ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯ (Cm siddaramaiah ) ಎಲ್ಲರೂ ಕೂಡ ಬೇಲ್ ಮೇಲೆ ಹೊರಗಿರುವವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಕಾಂಗ್ರೆಸ್ಸಿಗರು ನಮಗೆ ವಾರ್ನಿಂಗ್ ಕೊಡೋದು ಬಿಟ್ಟು, ಪಾಕಿಸ್ತಾನದ ಜೊತೆಗೆ ಭಾರತ ಯುದ್ಧ ಮಾಡುವ ಕುರಿತು ನಿಮ್ಮ ನಿಲುವು ಏನು ಎಂಬುದನ್ನು ಮೊದಲು ಪ್ರಕಟಿಸಿ.ನಿಮ್ಮ ಸಿಎಂ ಸಿದ್ಧರಾಮಯ್ಯ ಹೇಳುತ್ತಾರೆ.ನಮಗೆ ಯುದ್ಧ ಬೇಡ, ಶಾಂತಿ ಬೇಕು ಅಂತಾ.ಶಾಂತಿ ಬೇಕು ಅಂದವರು ನಿನ್ನೆ ವೇದಿಕೆಯಲ್ಲಿ ಶಾಂತಿಯನ್ನು ಏಕೆ ಪಾಲಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ನೀವು ನಮಗೆ ಗೊಡ್ಡು ಬೆದರಿಕೆ ಹಾಕಬೇಡಿ.ಮೊದಲು ನಿಮ್ಮದನ್ನು ನೀವು ಸರಿಪಡಿಸಿಕೊಳ್ಳಿ.ಈಗಾಗಲೇ ಕಾಂಗ್ರೆಸ್ ಎಲ್ಲೂ ಇಲ್ಲ.ದೇಶದ ಇಷ್ಟು ರಾಜ್ಯಗಳ ಪೈಕಿ ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ.ನಿಮ್ಮ ಪಕ್ಷದ ಸಿಎಂ ತೆಲಂಗಾಣದ ರೇವಂತ್ ರೆಡ್ಡಿ ಮಾತನ್ನು ಕೇಳಿ.ಆತ ನೀವು ಯುದ್ಧ ಮಾಡಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಮಾತನ್ನು ಆಡಿದ್ದಾರೆ.ಇಲ್ಲಿನ ಕಾಂಗ್ರೆಸ್ ಕಪಿಗಳು ಅದನ್ನು ಬಾಯಿ ಮಾತಿಗೂ ಹೇಳಿಲ್ಲ.ನಮಗೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ ಎಂದು ಗುಡುಗಿದ್ದಾರೆ.