ಬೆಂಗಳೂರು7: ಇಲ್ಲಿಯ ಕೆಂಪೇಗೌಡ ಏರ್ಪೋಟ್ ನಲ್ಲಿ (Kempegowda International Airport) ಗುರುವಾರವಷ್ಟೇ ಭಾರೀ ಪ್ರಮಾಣದಲ್ಲಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಶುಕ್ರವಾರ ಕೂಡ ಅಕ್ರಮವಾಗಿ ಸಾಗಿಸುತ್ತಿದ್ದ ಬಹುಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ 6.29 ಕೋಟಿ ಮೌಲ್ಯದ ಚಿನ್ನವನ್ನು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಬ್ಬರು ಮಹಿಳೆಯರು ಬ್ಯಾಂಕಾಕ್ ನಿಂದ ಆಗಮಿಸಿದ್ದರು. ಈ ಪೈಕಿ ನಾಜಿ ಲಿಟಿ ಎಂಬುವವರಿಂದ 2 ಕೆಜಿ 181 ಗ್ರಾಂ ಚಿನ್ನ ಹಾಗೂ ಆರತಿ ಸೆಗಾಲ್ ಎಂಬುವವರಿಂದ 4 ಕೆಜಿ 61 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಕೂಡ 2 ಕೆಜಿ 772 ಗ್ರಾಂ ಚಿನ್ನ ಪತ್ತೆಯಾಗಿದೆ. ಸದ್ಯ ಈ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.