ಶ್ರೀರಾಮುಲು (Sri ramulu) ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿ ಚುನಾವಣೆ (Delhi elections) ಇರುವ ಕಾರಣ ತಡವಾಗಿದೆ. ಇನ್ನು ಪಾರ್ಲಿಮೆಂಟ್ ಕೂಡಾ ಆರಂಭವಾಗಿರುವ ಕಾರಣ ತಡವಾಗಿದೆ. ಸಮಯ ನೋಡಿಕೊಂಡು ಹೋಗಿ ಎಲ್ಲಾ ವಿಚಾರ ತಿಳಿಸುತ್ತೇನೆ. ಬಿಜೆಪಿಯಲ್ಲಿ (Bjp) ನಾನು ತುಂಭಾ ವರ್ಷ ಸಿನಿಯರ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಚಾಮರಾಜನಗರದಿಂದ ಬೀದರ್ ವರೆಗೂ ನನಗೆ ಜನ ಪ್ರೀತಿ ತೋರಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೊನ್ನೆ ಸಣ್ಣ ಘಟನೆ ನಡೆದಾಗ ಕೂಡಾ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರು ನನಗೆ ಬೆಂಬಲ ಸೂಚಿಸಿದ್ದಾರೆ.ರಾಮುಲು ಅವರು ಅಧಿಕಾರ ಇಲ್ಲ ಎಂದು ಬಿಟ್ಟು ಕೊಡಬಾರ್ದು ಎಂದು ಬೆಂಬಲಿಸಿದ್ದಾರೆ. ರಾಜಕಾರಣದಲ್ಲಿ ನಾನು BJP ಯಲ್ಲಿ ಇದ್ದೇನೆ.ಒಬ್ಬರಿಗೆ ನೋವಾದಾಗ ಬೇರೆ ಪಕ್ಷದವರು ಕರೆಯೋದು ಸಹಜ. ಹಾಗೇ ಎಲ್ಲಾ ಸ್ನೇಹಿತರು ಕೂಡಾ ಆಹ್ವಾನಿಸಿದ್ದಾರೆ, ಅದು ಅವರ ದೊಡ್ಡ ಗುಣ ಎಂದು ರಾಮುಲು ಹೇಳಿದ್ದಾರೆ.
ಈ ವೇಳೆ ಒಂದು ಮಾತು ಸ್ಪಷ್ಟಪಡಿಸಿರುವ ರಾಮುಲು, ನಾನು ಯಾವುದೇ ಕಾರಣಕ್ಕೂ BJP ಪಕ್ಷ ಬಿಡಲ್ಲ.ಪಕ್ಷದ ಜೊತೆ ಇದ್ದು ಸಂಘರ್ಷ ಇಲ್ಲದಂತೆ ಇರುತ್ತೇನೆ.ದೆಹಲಿ ನಾಯಕರ ಬಳಿ ತೆರೆಳಿ ಎಲ್ಲಾ ವಿಚಾರ ಚರ್ಚೆ ಮಾಡುವೆ,ಚಿತ್ರದುರ್ಗದಿಂದ ಬೀದರ್ ವರೆಗೂ ನಮ್ಮವರೆ ಇದ್ದೇವೆ ಎಂದಿದ್ದಾರೆ.