ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬಹುತೇಕ ಎಲ್ಲರೂ ಇಷ್ಟ ಪಡುವ ತಿನಿಸು ಅಂದ್ರೆ ಅದು ಕೇಕ್ ಗಳು ಮತ್ತು ಪೇಸ್ಟ್ರಿಗಳು. ಹುಟ್ಟುಹಬ್ಬ ಇರಬಹುದು, ಆನಿವರ್ಸರಿ, ಏನೇ ಸೆಲೆಬ್ರೇಶನ್ ಇದ್ರೂ ಮೊದಲು ನೆನಪಾಗೋದು ಬಣ್ಣ ಬಣ್ಣದ ಬಾಯಿ ನೀರೂರಿಸುವ ಈ ಕೇಕು ಗಳು.

ಆದ್ರೆ ಇತ್ತೀಚಿನ ಕರ್ನಾಟಕ ಆರೋಗ್ಯ ಇಲಾಖೆಯ ಸಂಶೋಧನೆಯಲ್ಲಿ ಕಂಡುಕೊಂಡ ವರದಿ ಪ್ರಕಾರ ಈ ಕಲರ್ ಕಲರ್ ಕೇಕ್ ಗಳ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ನೀವು ಇಷ್ಟ ಪಟ್ಟು ಬಾಯಿ ಚಪ್ಪರಿಸಿ ತಿನ್ನುವ ಈ ತರಹೇವಾರಿ ಕೇಕ್ ಗಳು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು ಹುಷಾರಾಗಿರಿ.
ಹೌದು ಇತ್ತೀಚೆಗೆ ಸಾಕಷ್ಟು ಆಹಾರ ಪದಾರ್ಥಗಳ ನಿಜ ಸ್ವರೂಪ ತಿಳಿದ ಮೇಲೆ ಭಯ ಹುಟ್ಟಿರೋದು ನಿಮಗೆಲ್ಲ ತಿಳಿದಿದೆ. ಗೋಬಿಗೆ ಬಳಸುವ ಬಣ್ಣ, ಮಯಾನೀಸ್, ಶೇವರ್ಮ ಹೀಗೆ ಸಾಕಷ್ಟು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಯಾವ ರೀತಿ ಮಾರಕ ಎಂಬುದು ತಿಳಿದೆಯಿದೆ. ಆದ್ರೆ ಈಗ ಎಲ್ಲರ ಫೇವರಿಟ್ ಆಗಿರುವ ಕೇಕ್ ಗಳು ಕೂಡ ಅದೇ ಸಲ ಸೇರ್ಪಡೆಯಾಗಿದೆ.

ಸುಂದರವಾದ ಗಾಜಿನ ಬಾಕ್ಸ್ ಒಳಗೆ ಇಡಲ್ಪಡುವ ಈ ಬಣ್ಣ ಬಣ್ಣದ ಕೇಕ್ ಗಳು ನೋಡಲು ಬಹಳ ಆಕರ್ಷಕ. ಆದ್ರೆ ಹೀಗೆ ಆಕರ್ಷಿಸಲು ಬಳಸುವ ಬಣ್ಣಗಳೇ ನಿಮಗೆ ಮಾರಕವಾಗುತ್ತವೆ. ಹೌದು, ಕೆಂಪು,ನೀಲಿ,ಹಳದಿ,ಹಸಿರು ಹೀಗೆ ಕೇಕ್ ನಲ್ಲಿ ಬಳಸುವ ಹಲವು ಬಣ್ಣಗಳೇ ಆರೋಗ್ಯಕ್ಕೆ ತೀವ್ರ ಹಾನಿಕಾರಕ ಎಂಬ ಸತ್ಯ ಬಯಲಾಗಿದೆ.
ಕೇಕ್ ತಯಾರಿಕೆಯಲ್ಲಿ ಬಳಕೆ ಮಾಡುವ ಈ ಬಣ್ಣಗಳು ಕ್ಯಾನ್ಸರ್, ಥೈರಾಯಿಡ್ ರೀತಿಯ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಒಂದೊಂದು ಬಣ್ಣಗಳೂ ಕೂಡ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಈ ಅಧ್ಯಯನದ ವರದಿ ಹೇಳುತ್ತದೆ.

ರೆಡ್ ವೆಲ್ವೆಟ್ ಕಲರ್ ನಿಂದ ಥೈರಾಯಿಡ್ ಬರುತ್ತದೆ. ನೀಲಿ ಬಣ್ಣದ ಬಳಕೆಯಿಂದ ಬ್ರೈನ್ ಕ್ಯಾನ್ಸರ್ ಬರುತ್ತದೆ ಹಾಗೂ ಹಸಿರು ಬಣ್ಣದ ಬಳಕೆಯಿಂದ ಬ್ಲಾಡರ್ ಕ್ಯಾನ್ಸರ್ ಮತ್ತು ಹಳದಿ ಬಣ್ಣದಿಂದ ಕಿಡ್ನಿ ಕ್ಯಾನ್ಸರ್ ಬರುವ ಸಂಭವಗಳು ಹೆಚ್ಚಾಗಿದೆ ಎಂದು ಕರ್ನಾಟಕದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ವರದಿ ಕೇಕ್ ಪ್ರಿಯರಲ್ಲಿ ಆತಂಕ ಹುಟ್ಟಿಸಿದೆ.

ಹೀಗಾಗಿ ಕಲರ್ ಕಲರ್ ಕೇಕ್ ಗಳನ್ನು ತಿನ್ನುವುದನ್ನು ಮೊದಲು ನಿಲ್ಲಿಸಿ ಮತ್ತು ಸಾಧ್ಯವಾದಷ್ಟು ನ್ಯಾಚುರಲ್ ಕೇಕ್ ಗಳ ಮೊರೆ ಹೋಗಿ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈ ಮಾರಕ ಬಣ್ಣಗಳ ಬಳಕೆಯ ನಿಷೇಧದ ಬಗ್ಗೆಯೂ ಚಿಂತನೆ ನಡೆಸಿದೆ.