ಅರೆ ಬಾಬಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ವರದಿಯನ್ನ ಮಂಡನೆ ಮಾಡುವ ಧೈರ್ಯ ಮಾಡಲಿಲ್ಲ. ಸಿದ್ದರಾಮಯ್ಯ ಎಸ್ಸಿ ಎಸ್ಟಿ ಸಮುದಾಯದ ಸಮಾವೇಶಕ್ಕೆ ಹೋಗಿ ಮಾತನಾಡದೆ ಬರಿ ದೀಪ ಹಚ್ಚಿ ಬಂದರು ಅಷ್ಟೇ.
ಎಸ್ಸಿ-ಎಸ್ಟಿ ಒಳ ಮೀಸಲಾತಿ ವಿಚಾರದ ಕುರಿತು ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದ ಸಂದರ್ಭದಲ್ಲಿ ಏನು ಮಾಡಿದರು? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಒಳ ಮೀಸಲಾತಿ ವಿಚಾರದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ‘ಅರೆ ಬಾಬಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ರಲ್ಲ ಏನು ಮಾಡುದ್ರಿ?’ ಎಂದು ಪ್ರಶ್ನೆ ಮಾಡಿದ್ದಾರೆ.
ಸಮುದಾಯದ 40 ವರ್ಷದ ಬೇಡಿಕೆ ಬಗ್ಗೆ ಕಾಂಗ್ರೆಸ್ ಒಮ್ಮೆಯೂ ತಿರುಗಿ ನೋಡಿರಲಿಲ್ಲ. ಆದರೆ ಇದೀಗನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅರೆ ಬಾಬಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ವರದಿಯನ್ನ ಮಂಡನೆ ಮಾಡುವ ಧೈರ್ಯ ಮಾಡಲಿಲ್ಲ. ಸಿದ್ದರಾಮಯ್ಯ ಎಸ್ಸಿ ಎಸ್ಟಿ ಸಮುದಾಯದ ಸಮಾವೇಶಕ್ಕೆ ಹೋಗಿ ಮಾತನಾಡದೆ ಬರಿ ದೀಪ ಹಚ್ಚಿ ಬಂದರು ಅಷ್ಟೇ.
ಈ ಎಲ್ಲಾ ನಡೆ ನುಡಿಗಳು ಜನರ ಮನದಾಳದಲ್ಲಿದೆ. ಜನರನ್ನ ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಟೀಕಿಸಿದರು.