ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ (Budget session) ಸರ್ಕಾರದ ಸಚಿವರುಗಳೇ ಗೈರು ಹಾಜರಾಗುತ್ತಿರುವುದರಿಂದ ಸ್ಪೀಕರ್ ಯು.ಟಿ. ಖಾದರ್ (UT Khadar) ಸಚಿವರಿಗಳ ವಿರುದ್ಧ ಗರಂ ಆಗಿದ್ದಾರೆ.

ನಮ್ಮ ಸಚಿವರೇ ರಾಜ್ಯ ಸರ್ಕಾರದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಯು.ಟಿ.ಖಾದರ್ ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ. ವಿರೋಧ ಪಕ್ಷದ ನಯ ಆರ್.ಅಶೋಕ್ ಮಾತನಾಡಿ ಸದನದಲ್ಲಿ ಸಚಿವರೇ ಇಲ್ಲ ಎಂದು ಹೇಳಿದ್ದಕ್ಕೆಸ್ಪೀಕರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಗರಂ ಆದ ಸ್ಪೀಕರ್ ಯು.ಟಿ ಖಾದರ್, ನೀವುಗಳು ಸರಿಯಾದ ಸಮಯಕ್ಕೆ ಅಧಿವೇಶನಕ್ಕೆ ಬಂದು ಹಾಜರಾಗಲು ಸಾಧ್ಯವಾಗಲಿಲ್ಲ ಎಂದಾದರೆ ಏಕೆ ಸಚಿವರಾಗಬೇಕು? ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದಿದ್ದರೆ ಮಂತ್ರಿಗಿರಿ ಯಾಕೆ ಬೇಕು ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ.