
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ Siddaramaiah ಹೆಸರು ತಳುಕು ಹಾಕಿಕೊಂಡಿರುವ ಬೆನ್ನಲ್ಲೇ ಹಿರಿಯ ಸಚಿವ ಆರ್.ವಿ ದೇಶಪಾಂಡೆ ಹೇಳಿರುವ ಮಾತು ಕಾಂಗ್ರೆಸ್ ಒಳಗೆ ಸಂಚಲನ ಮೂಡಿಸಿದೆ. ಆರ್.ವಿ ದೇಶಪಾಂಡೆ ಅವರು ಈ ರೀತಿ ಹೇಳಿಕೆ ಹಿಂದಿನ ಗುಟ್ಟೇನು ಅನ್ನೋ ಬಗ್ಗೆ ಕಾಂಗ್ರೆಸ್ Congress ಒಳಗೆ ಚರ್ಚೆ ಶುರು ಆಗಿದೆ. ಈ ಬಗ್ಗೆ ಸಾಕಷ್ಟು ಸಚಿವರು ಮಾತನಾಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ದೇಶಪಾಂಡೆ ಅವರು ಹಿರಿಯರಿದ್ದಾರೆ. ಅದರು ಏನೋ ಹೇಳಿದ್ದಾರೆ. ನಾನು ಅವರ ಮಟ್ಟದಲ್ಲಿ ಮಾತನಾಡಲು ಆಗಲ್ಲ. ನಾನಿನ್ನು ಸಣ್ಣವನು ಎಂದಿದ್ದಾರೆ.

ಧಾರವಾಡದಲ್ಲಿ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, ದೇಶಪಾಂಡೆ ಅವರು ಅತ್ಯಂತ ಹಿರಿಯರು. 8 ಬಾರಿ ಶಾಸಕರಾದವರು. ಸಿದ್ದರಾಮಯ್ಯ ಹೇಳಿದ್ರೆ ನಾನು ಸಿಎಂ ಆಗ್ತೀನಿ ಅಂತ ಅವರು ಹೇಳಿದ್ದಾರೆ ಅಷ್ಟೇ. ಮೈಸೂರಿಗೆ ಹೋದಾಗ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ಹಾಗೆ ಹೇಳಿದ್ದಾರೆ. ‘ನೋಡಪ್ಪಾ, ನಾನು ಸೀನಿಯರ್ ಇದೀನಿ, ಮಿನಿಸ್ಟರ್ ಆಗಿ ಬಹಳ ದಣಿದುಕೊಂಡಿದ್ದೀನಿ’ ಅಂತ ಹಾಗೆ ಹೇಳಿದ್ದಾರೆ. ಅದನ್ನು ನೀವು ಜಮೀರ್ ಆಹ್ಮದ್ ಬಳಿ ಕೇಳಿದಾಗ ಅವರು ಸಹ ಯಾರೂ ಬೇಕಾದ್ರೂ ಸಿಎಂ ಆಗಬಹುದು. ಆದ್ರೆ ಸಿದ್ದರಾಮಯ್ಯ ಅಲ್ಲಿದ್ದಾರೆ ಎಂದಿದ್ದಾರೆ. ಯಾರೂ ಕೂಡ ಸಿದ್ದರಾಮಯ್ಯ ವಿರುದ್ಧ ಮಾತಾಡಿಲ್ಲ. ಇಲ್ಲಿ ಸಿಎಂ ಆಗುವ ಆಸೆಯ ಪ್ರಶ್ನೆ ಬರುವುದಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಜನರು ಆಯ್ಕೆ ಮಾಡಿರುವ 136 ಶಾಸಕರು ಸಿದ್ದರಾಮಯ್ಯ ಪರವಾಗಿದ್ದಾರೆ. ಮೊನ್ನೆ ನಡೆದ ಸಭೆಯಲ್ಲೂ ಎಲ್ಲರೂ ಒಂದೇ ಮಾತಿನಲ್ಲಿ ಹೇಳಿದ್ದು, ಸಿದ್ದರಾಮಯ್ಯ ಜೊತೆ ನಾವಿದ್ದೇವೆ. ನಮ್ಮ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಜೊತೆಗಿದೆ. ಮುಂದೆ ಇನ್ನೊಬ್ಬರು ಸಿಎಂ ಆಗೋದು ಈಗ ಅಪ್ರಸ್ತುತ ಎಂದಿದ್ದಾರೆ ಸಚಿವ ಭೋಸರಾಜು.

ಈ ಬಗ್ಗೆ ಮೈಸೂರಿನಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಿಎಂ ಮಾಡುವುದು ಯಾರು ಹೇಳಿ..? ಶಾಸಕರು ಹಾಗೂ ಹೈಕಮಾಂಡ್ ನಾಯಕರು. ಸಿಎಂ ಯಾರಾಗಬೇಕು ಎಂದು ತೀರ್ಮಾನ ಅವರು ಮಾಡುವಾಗ ನಾನು ಹೇಗೆ ಸಿಎಂ ಮಾಡಲಿ..? ಎಂದು ಪ್ರಶ್ನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮೂಲಕ ಸಿದ್ದರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಯನ್ನು ನಯವಾಗಿಯೇ ತಳ್ಳಿ ಹಾಕಿದ್ದಾರೆ.