ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah)ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಕಾಂಗ್ರೆಸ್ ಹೈಕಮಾಂಡ್ ಅವರ ಪರ ಇದ್ದರೂ ಈ ಸ್ಥಾನದಲ್ಲಿ ಮುಂದುವರಿಯಲು ಬರಲ್ಲ. ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡ್ತೀವಿ ಅಂತ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಡುಗಿದರು.
ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ದೇಶದ ಕಾನೂನು ಎಷ್ಟು ಗಟ್ಟಿಯಾಗಿದೆ ಅನೋದು ಕೋರ್ಟ್ ಇಂದಿನ ಆದೇಶದಿಂದ ಖಾತ್ರಿಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸಹ ಇದರಿಂದ ಜನ ಅರ್ಥಮಾಡಿಕೊಂಡಿದ್ದಾರೆ. ಈ ದೇಶದ ಕಾನೂನನ್ನು ಧಿಕ್ಕರಿಸಿ ಮಾಡುವ ಯಾವುದೇ ಪ್ರಯತ್ನಗಳು ಸಹ ಸಾಂದರ್ಭಿಕವಾಗಿ ತತಕ್ಷಣಕ್ಕೆ ಅವರಿಗೆ ಒಳ್ಳೆಯದಾಗಬಹುದು. ಆದ್ರೆ ದೀರ್ಘಕಾಲವಾಗಿ ಇರಲ್ಲ. ಕಾನೂನನ್ನು ಮುರಿಯುವವರಿಗೆ, ವಿರೋಧಿಸುವವರಿಗೆ ನ್ಯಾಯ ಸಿಗ್ಲಲ ಅನ್ನೋದನ್ನ ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ ಎಂದು ಹೇಳಿದರು.
ಮುಂದುವರಿದು… ಸಿಎಂ ಕುಟುಂಬವೇ ಇಂತಹ ಅವ್ಯವಹಾರದಲ್ಲಿ ತೊಡಗಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರು 2 ಬಾರಿ ಡಿಸಿಎಂ ಆಗಿದ್ದವರು, ವಿಪಕ್ಷ ನಾಯಕರಾಗಿದ್ದವರು. 2ನೇ ಬಾರಿಗೆ ಮುಖ್ಯಮಂತ್ರಿ ಸಹ ಆಗಿದ್ದಾರೆ. ಅವರು ತಮ್ಮದೇ ಅಲ್ಲದ ಮುಡಾದ ಭೂಮಿಗೆ ಪರಿಹಾರ ಕೇಳಿದ್ದು ತಪ್ಪು, ಇದರ ವಿರುದ್ಧ ಬೆಂಗಳೂರಿನ ಮೈಸೂರಿನ ವರೆಗೆ ಬಿಜೆಪಿ ದೊಡ್ಡ ಹೋರಾಟ ಬಯಲಿಗೆಳೆಯುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.