ಜನರ ಸಮಸ್ಯೆಗಳಿಗೆ ಅಧಿಕಾರಿಗಳು (Officers) ತುರ್ತಾಗಿ ಸ್ಪಂದಿಸಬೇಕು, ಒಂದು ವೇಳೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ (problems) ಸರಿಯಾಗಿ ಸ್ಪಂದಿಸದೇ ಇದ್ದರೆ ಅಲ್ಲಿ ಭ್ರಷ್ಟಾಚಾರ (Corruption) ವ್ಯಾಪಕವಾಗಿ ನಡೆಯುತ್ತಿದೆ ಎಂದು ಅರ್ಥ ಅಂತ ಸಿಎಂ ಸಿದ್ದರಾಮಯ್ಯ (CM Siddaramaiah) ದಾವಣಗೆರೆಯಲ್ಲಿ (Davanagere) ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಜನ ಬದಲಾವಣೆಯನ್ನ ಬಯಸಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಹಾಗಾಗಿ ಜನರಿ ಉತ್ತಮವಾದ ಸೇವೆ (Good service) ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಜನರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡ ಬಂದಾಗ ಅವರ ಸಮಸ್ಯೆಯನ್ನ ಬಗೆ ಹರಿಸುವಲ್ಲಿ ಅಧಿಕಾರಿಗಳು ತುರ್ತಗಿ ಸ್ಪಂದಿಸುವ ಅಗತ್ಯವಿದೆ. ಒಂದು ವೇಳೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಮುಲಾಜಿಲ್ಲದೆ ಕ್ರಮ (Action without hesitation) ಕೈಗೊಳ್ಳಲಾಗುವುದು ಅಂತಾ ಸಿಎಂ ಸಿದ್ದರಾಮಯ್ಯ (CM SIDDARAMAIAH) ಹೇಳಿಕೆ ನೀಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಮಾತನಾಡಿದ ಸಿಎಂ ಕಂದಾಯ, ಕೃಷಿ, ಪೊಲೀಸ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ತಹಶೀಲ್ದಾರ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಹಾಗೂ ಹೊಬಳಿ ಮಟ್ಟಕ್ಕೆ ಭೇಟಿ ನೀಡಬೇಕು. ಯಾವುದೇ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಬಂದರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸೂಕ್ರವಾದ ಎಚ್ಚರಿಕೆಯನ್ನ ಕೂಡ ಸಿಎಂ ನೀಡಿದ್ದಾರೆ.