ಹಾಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನದ ಕಲಾಪ ಶುರುವಾಗುವುದಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಪ್ರತಿಭಟಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಜೋಶಿ ನಮ್ಮ ಮತ್ತು ಅವರ ನಡುವೆ ತತ್ವ ಸಿದ್ದಾಂತಗಳ ವಿಚಾರದಲ್ಲಿ ಕೆಲವು ಭಿನ್ನಾಬಿಪಗ್ರಾಯಗಳಿರಬಹುದು ಆದರೆ ಸಾವರ್ಕರ್ ಒಬ್ಬ ಅಪ್ರತಿಮ ಮಾಜಿ ಸಿಎಂ ಸಿದ್ದರಾಮಯ್ಯ ಬದಲು ಇವರಿಗೆ ದಾವೂದ್ ಇಬ್ರಾಹಿಂ ಪೋಟೋ ಹಾಕಬೇಕಿತ್ತಾ ಎಂದು ಕಿಡಿಕಾರಿದ್ದಾರೆ.

ಸಾವರ್ಕರ್ ಪೋಟೋ ಸಂಸತ್‌ನಲ್ಲೂ ಸಹ ಇದೇ ಅವರೊಬ್ಬ ಮಹಾನ್ ರಾಷ್ಟ್ರೀಯವಾದಿ ನಾಯಕರಾಗಿದ್ದರು ಸ್ವಾತಂತ್ರ್ಯ ಚಳುವಳಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಹಾಗೂ ನಮ್ಮ ನಡುವೆ ಭಿನ್ನಾಬಿಪ್ರಾಯಗಳಿರಬಹುದು ಆದರೆ ನಾವು ಎಂದಿಗೂ ಅವರನ್ನು ವಿರೋಧಿಸಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನ ವಿರೋಧಿಸುವುದು ಕಾಂಗ್ರೆಸ್‌ಗೆ ಒಳ್ಳೆಯದಲ್ಲ ತುಷ್ಟೀಕರಣ ರಾಜಕಾರಣ ಮಾಡುವುದರಲ್ಲಿ ಕಾಂಗ್ರೆಸ್ ನಿರತವಾಗಿದೆ ಸದಾ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ನಾಯಕರ ತ್ಯಾಗ ಬಲಿದಾನದ ಕುರಿತು ಹೇಳುತ್ತಾರಷ್ಟೆ ಹೊರತು ಬೇರೇನು ಇಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷವೇ ಬೇರೆ ಈಗಿರುವ ನಕಲಿ ಕಾಂಗ್ರೆಸ್ ಪಕ್ಷವೇ ಬೇರೆ ಎಂದು ವ್ಯಂಗ್ಯವಾಡಿದ್ದಾರೆ.