ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ದೇವೇಗೌಡರು ರಾಜ್ಯಸಭೆಗೆ ನಾಮಪತ್ರ ಹಾಕಿದ್ದಾಗ, ಅವರು ಮಾಜಿ ಪ್ರಧಾನಿಗಳು, ರಾಜ್ಯಸಭೆಗೆ ಹೋಗಬೇಕು ಎಂದು ನಾವು ನಾಮಪತ್ರ ಹಾಕಿಲ್ಲ. ನಾವು ಅವರಂತೆ ಜೆಡಿಎಸ್ ಗೆ ಸಮಯ ನಿಗದಿ ಮಾಡಲ್ಲ. ಅವರಿಗೆ ಜಾತ್ಯಾತೀತ ತತ್ವದಲ್ಲಿ ನಿಜವಾಗಿ ನಂಬಿಕೆ ಇದ್ದರೆ, ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದಿದ್ದರೆ ನಮಗೆ ಬೆಂಬಲ ಕೊಡಲಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ಕೋಮುವಾದಿ ಪಕ್ಷ ಗೆಲ್ಲಬಾರದು ಎಂಬುದು ಜೆಡಿಸ್ ನ ಉದ್ದೇಶವಾಗಿದ್ದರೆ, ಒಂದು ದಿನ ಮುಂಚಿತವಾಗಿ ನಾಮಪತ್ರ ಸಲ್ಲಿಸಿದ್ದು ನಾವು, 24 ಗಂಟೆಗಳ ನಂತರ ಜೆಡಿಎಸ್ ನವರು ನಾಮಪತ್ರ ಹಾಕಿದ್ದಾರೆ. ಈ ರೀತಿ ನಾಮಪತ್ರ ಹಾಕಬಾರದಿತ್ತು ಅಲ್ವಾ? ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. 37 ಜನ ಶಾಸಕರನ್ನು ಹೊಂದಿದ್ದ ಕುಮಾರ ಸ್ವಾಮಿಗೆ ಬೆಂಬಲ ನೀಡಿದ್ದು ನಾವು. ದೇವೇಗೌಡರಿಗೆ ನಾವು ಬೆಂಬಲಿಸಿದ್ದರಿಂದ ಪ್ರಧಾನಿಯಾದರು ಅಲ್ವಾ? ಹಾಗಾಗಿ ಈಗ ಜೆಡಿಎಸ್ ನವರು ನಮಗೆ ಸಹಾಯ ಮಾಡಬೇಕೋ ಬೇಡ್ವೋ? ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೇವೆ, ಆತ ಸಜ್ಜನ, ಪ್ರಗತಿಪರ ಚಿಂತನೆ ಇರುವ, ಜಾತ್ಯತೀತತೆಯಲ್ಲಿ ಬದ್ಧತೆ ಇರುವ ವ್ಯಕ್ತಿ. ಜೆಡಿಎಸ್ ಗೆ ನಿಜವಾಗಿ ಬಿಜೆಪಿ ಬರಬಾರದು ಎಂದು ಇದ್ದರೆ ನಮ್ಮ ಅಭ್ಯರ್ಥಿಗೆ ಬೆಂಬಲಿಸಲಿ ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಹೈಕಮಾಂಡ್ ನವರೇ ನಮಗೆ ಎರಡನೇ ಅಭ್ಯರ್ಥಿ ಹಾಕಿ ಎಂದು ಹೇಳಿದ್ದು, ಜೆಡಿಎಸ್ ನವರು ತಮ್ಮ ಅಭ್ಯರ್ಥಿಯನ್ನು ನಿವೃತ್ತಗೊಳಿಸಿ ನಮ್ಮನ್ನು ಬೆಂಬಲಿಸಲಿ. ಇಲ್ಲಿ ಎರಡನೇ, ಮೂರನೇ ಪ್ರಾಶಸ್ತ್ಯದ ಮತಗಳ ವಿಚಾರ ಬರುವುದೇ ಇಲ್ಲ. ಜೆಡಿಎಸ್ ನವರು ನಮ್ಮ ಜೊತೆ ಅಧಿಕೃತ ಮಾತುಕತೆ ನಡೆಸಿದ್ದಾರಾ? ನಾವು ಮೊದಲು ಅಭ್ಯರ್ಥಿ ಇಳಿಸಿದ್ದು, ಯಾರ ಪರ ನ್ಯಾಯ ಇದೆ? ಜೆಡಿಎಸ್ ಗಿಂತ ಒಂದು ದಿನ ಮುಂಚಿತವಾಗಿ ನಾವು ನಾಮಪತ್ರ ಹಾಕಿದ್ದು ಎಂದು ಹೇಳಿದ್ದಾರೆ.

ದೇವೇಗೌಡರು ರಾಜ್ಯಸಭೆಗೆ ನಾಮಪತ್ರ ಹಾಕಿದ್ದಾಗ, ಅವರು ಮಾಜಿ ಪ್ರಧಾನಿಗಳು, ರಾಜ್ಯಸಭೆಗೆ ಹೋಗಬೇಕು ಎಂದು ನಾವು ನಾಮಪತ್ರ ಹಾಕಿಲ್ಲ. ನಾವು ಅವರಂತೆ ಜೆಡಿಎಸ್ ಗೆ ಸಮಯ ನಿಗದಿ ಮಾಡಲ್ಲ. ಅವರಿಗೆ ಜಾತ್ಯಾತೀತ ತತ್ವದಲ್ಲಿ ನಿಜವಾಗಿ ನಂಬಿಕೆ ಇದ್ದರೆ, ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದಿದ್ದರೆ ನಮಗೆ ಬೆಂಬಲ ಕೊಡಲಿ ಎಂದು ಹೇಳಿದ್ದಾರೆ.
ಹಲವು ಶಾಸಕರು ಜೆಡಿಎಸ್ ಅನ್ನು ಕೈಬಿಡುತ್ತಿದ್ದಾರೆ. 45 ಮತಗಳು ಅಲ್ಲದೆ ನಮ್ಮ ಬಳಿ 26 ಹೆಚ್ಚುವರಿ ಮತಗಳು ಇವೆ. ಜೈರಾಮ್ ರಮೇಶ್ ಗೆ ಹಾಕುವ ಎಲ್ಲ ಮತಗಳು ಮನ್ಸೂರ್ ಅಲಿ ಖಾನ್ ಗೆ ಎರಡನೇ ಪ್ರಾಶಸ್ತ್ಯದ ಮತಗಳಾಗಿ ಹಾಕುತ್ತೇವೆ, ಇವುಗಳ ಜೊತೆಗೆ ನಮಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಕಡೆಯ ಈ ಮತಗಳು ನಮಗೆ ಬೀಳುತ್ತೆ ಎಂದಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಬಳಿ ನಾವು ಹೋಗಿದ್ದು ನಿಜ. ನಮ್ಮಲ್ಲಿ 80 ಜನ ಶಾಸಕರಿದ್ದರು. 37 ಜನ ಶಾಸಕರಿದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿಲ್ವ? ಜೆಡಿಎಸ್ ನವರು ಕೊನೆ ಘಳಿಗೆಯಲ್ಲಿ ತಮ್ಮ ಅಭ್ಯರ್ಥಿಯನ್ನು ನಿವೃತ್ತಗೊಳಿಸಿ ನಮಗೆ ಬೆಂಬಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದ್ದಾರೆ.