ಕಾಂಗ್ರೆಸ್ ನಾಯಕರು ತಾವು ಮುಳುಗುವುದಲ್ಲ, ತಮ್ಮ ಜೊತೆಗೆ ಬೇರೆಯವರನ್ನು ಮುಳುಗಿಸುತ್ತಾರೆ. ನಾನು ಹೋದರೆ ನಾನು ಮುಳುಗಬೇಕಾಗುತ್ತದೆ ಎಂದು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬಿಹಾರದಲ್ಲಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ನಾನು ಎಂದೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜೊತೆ ಸೇರಲಿದ್ದೀರಿ ಎಂಬ ಸುದ್ದಿ ಹರಡಿತ್ತು. ಆದರೆ ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಕಾಂಗ್ರೆಸ್ ನಾಯಕರು ತಮ್ಮನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರ ಜೊತೆ ಹೋದರೆ ನನ್ನ ಸ್ಥಿತಿಯೂ ಅದೇ ಆಗುತ್ತದೆ ಎಂದರು.

2015ರಲ್ಲಿ ನಾವು ಬಿಹಾರ ಗೆದ್ದೆವು. 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ತಮಿಳುನಾಡು ಮತ್ತು ಬಂಗಾಳದಲ್ಲೂ ಗೆದ್ದೆವು. 11 ವರ್ಷಗಳಲ್ಲಿ ನಾವು ಸೋತಿದ್ದು ಉತ್ತರ ಪ್ರದೇಶದಲ್ಲಿ ಮಾತ್ರ. ಆದ್ದರಿಂದ ನಾನು ಕಾಂಗ್ರೆಸ್ ನಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಪ್ರಶಾಂತ್ ಕಿಶೋರ್ ವಿವರಿಸಿದರು.