ನಾನು ಗೃಹ ಸಚಿವನಾಗಿದ್ದರೆ ಅವರನ್ನು ಉಡಾಯಿಸುತ್ತಿದ್ದೆ. ಎಲ್ಲರನ್ನೂ ಸ್ವರ್ಗಕ್ಕೆ ಕಳಿಸುತ್ತಿದ್ದೆ. ಅಗರ ಜ್ಞಾನೇಂದ್ರ ಆ ಸ್ಥಾನಕ್ಕೆ ಲಾಯಕ್ಕಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೌಮ್ಯ ಸ್ವಭಾವದವರು ಆಗಿದ್ದರೆ ಕಂದಾಯ, ಲೋಕೋಕಪಯೋಗಿ ಮುಂತಾದ ಬೇರೆ ಖಾತೆ ವಹಿಸಿಕೊಳ್ಳಬೇಕು. ಗೃಹ ಖಾತೆಯನಲ್ಲ. ನನಗೆ ಈ ಖಾತೆ ಕೊಟ್ಟಿದ್ದರೆ ಕಥೆಯೇ ಬೇರೆ ಆಗಿರುತ್ತಿತ್ತು ಎಂದರು.
ರಾಜ್ಯದ ಗೃಹ ಸಚಿವರು ಶಾಂತಿ ಸಮಾಧಾನದಿಂದ ಇದ್ದರೆ ಆಗುವುದಿಲ್ಲ. ಇಂತಹ ಘಟನೆಗಳನ್ನು ಹತ್ತಿಕ್ಕಬೇಕಾದರೆ, ಅವರೂ ಚತ್ರಿ ಆಗಬೇಕು. ಕೆಲ ಮುಸ್ಲಿಮರಿಗೆ ಹಿಜಬ್, ದೇಶ ವಿರೋಧಿ ಚಟುವಟಿಕೆಗಳು ಬೇಕಾಗಿದೆಯೇ ಹೊರತು ಸಾಮರಸ್ಯ ಬೇಕಿಲ್ಲ. ಇವರನ್ನು ಹೀಗೆ ಬಿಟ್ಟರೇ ದೇಶಕ್ಕೆ ಮಾರಕವಾಗುತ್ತಾರೆ. ಕೆಜಿ ಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರೆ ಮತ್ತೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಧಿಕಾರದಲ್ಲಿ ಇದ್ದಿದ್ದರೆ ರಾಜ್ಯದಲ್ಲೂ ಪಾಕಿಸ್ತಾನ ಇರುತ್ತಿತ್ತು. ಇಂದು ಮತಾಂಧರಿಗೆ ಭಯ ಹುಟ್ಟಿಸುವ ಕೆಲಸವನ್ನು ಸರ್ಕಾರ ಹಾಗೂ ಗೃಹ ಸಚಿವರು ಮಾಡಬೇಕು. ಅದು ಬಿಟ್ಟು ಸಮಾಧಾನ ಹೇಳುವುದರಲ್ಲಿ ಪ್ರಯೋಜನವಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧವೇ ಕಿಡಿಕಾರಿದರು.
ಉತ್ತರ ಪ್ರದೇಶದಲ್ಲಿ ರಾಮನವಮಿ ರ್ಯಾಲಿ ವೇಳೆ ಒಂದು ಗಲಭೆಯೂ ನಡೆದಿಲ್ಲ. ಇಲ್ಲಿನ ಘಟನೆ ನೋಡಿದರೆ, ಇದು ಬಿಜೆಪಿ ಹೆಸರು ಕೆಡಿಸಲು ಮಾಡಿರುವ ದೊಡ್ಡ ಷಡ್ಯಂತ್ರವೆಂಬುದು ಅರ್ಥವಾಗುತ್ತದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಆದರೂ ನಮ್ಮಲ್ಲಿರುವ ಡೋಂಗಿ ಜಾತ್ಯಾತೀತರಿಗೆ ದೇಶದ ಬದಲಾಗಿ ಮುಸ್ಲಿಮರ ವೋಟು ಬೇಕಾಗಿದೆ ಎಂದು ಕುಟುಕಿದರು.
ರಾಜ್ಯದಲ್ಲಿ ಪದೇ ಪದೇ ಇಂಥ ಘಟನೆ ಆಗ್ತಿದೆ. ಇಂತಹ ಹೊತ್ತಿನಲ್ಲಿ ಸರ್ಕಾರ ಶಾಂತಿ ಮಂತ್ರ ಹೇಳ್ತಾ ಕೂತ್ರೆ ಆಗಲ್ಲ. ಕ್ರಮ ತಗೋತೀವಿ – ತಗೋತಿವಿ, ತೀವ್ರವಾಗಿ ಖಂಡಿಸ್ತೀವಿ ಅಂದ್ರೆ ಏನೂ ಆಗಲ್ಲ. ಸರ್ಕಾರದಿಂದ ಇಂತಹವರ ಮೇಲೆ ಕಠಿಣ ಕ್ರಮ ಆಗುತ್ತಿಲ್ಲ. ಏಕೆಂದರೆ ನಮ್ಮ ಸರ್ಕಾರ ಪೊಲೀಸರಿಗೂ ಫ್ರೀ ಹ್ಯಾಂಡ್ ಕೊಡ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಿವಾದಿತ ಪೋಸ್ಟ್ ಹಾಕಿದವನ ವಿರುದ್ಧ ಕ್ರಮ ಆಗಬೇಕು. ಎಷ್ಟೋ ಜನ ನಕಲೀ ಖಾತೆ ಮೂಲಕ ಶ್ರೀರಾಮನ ಬಗ್ಗೆ, ಪ್ರಧಾನಿ ಬಗ್ಗೆ ಹಗುರವಾದ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಾರೆ. ಹಾಗೆಯೇ ಹಿಂದೂಗಳ ಹೆಸರಿನಲ್ಲೂ ಖಾತೆ ತೆರೆದು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲಿ ಪ್ರಸಾದ್ ಅನ್ನೋ ಹೆಸರಿನಲ್ಲಿ ಖಾತೆ ಇದ್ದರೆ, ಪೋಸ್ಟ್ ಹಾಕೋನು ಮೆಹಬೂಬ್ ಆಗಿರ್ತಾನೆ. ಈ ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.