Mandya ಕೆರಗೋಡು ವಿಚಾರದಲ್ಲಿ BJP JDS ಎಲ್ಲಾ ಕಡೆಯಲ್ಲೂ ಹೋರಾಟ ಶುರು ಮಾಡಿದ್ದಾರೆ. ಈ ವಿಚಾರವಾಗಿ ಕೋಲಾರದಲ್ಲಿ ಮಾತನಾಡಿರುವ ಶಾಸಕ ಕೊತ್ತೂರು ಮಂಜುನಾಥ್, ಬಿಜೆಪಿ ಹೋರಾಟಕ್ಕೆ ತಿರುಗೇಟು ನೀಡಿದ್ದಾರೆ. ಪ್ರಧಾನಿ Narendra modi ರಾಜ್ಯಕ್ಕೆ ಬರ ಪರಿಹಾರದ ಹಣ ನೀಡಿಲ್ಲ. ಮೋದಿಯವರ ಎರಡು ಕಾಲು ಹಿಡಿದುಕೊಂಡಾದರೂ ರಾಜ್ಯಕ್ಕೆ ಬಿಜೆಪಿ ನಾಯಕರು NDRF ಪರಿಹಾರ ಕೊಡಿಸಲಿ ಎಂದಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಲಾರದ ರೈತರಿಗೆ ಬರ ಪರಿಹಾರ ನೀಡಿದೆ, ಪರಿಹಾರ ಹಂಚಿಕೆ ಮಾಡಿರುವುದಕ್ಕೆ ನಮ್ಮ ಬಳಿ ದಾಖಲೆಯಿದೆ. R ಅಶೋಕ್ ಅವರಿಗೆ ಯೋಗ್ಯತೆ ಇದ್ದರೆ ಮೊದಲು ಕೇಂದ್ರದಿಂದ ಪರಿಹಾರ ಕೊಡಿಸಲಿ ಎಂದು Kotturu Manjunath ಸವಾಲು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೋಮಾರಿ ಎಂಬ ಹೇಳಿಕೆಗೆ ಕಿಡಿಕಾರಿರುವ ಕೊತ್ತೂರು ಮಂಜುನಾಥ್, 2022ರ ಹಿಂದೆ ಯಾರು ಹೇಗಿದ್ದರು..? ಮನೆಯಲ್ಲಿ ಕುತ್ಕೊಂಡು ಎಣ್ಣೆ ಹೊಡ್ಕೊಂಡಿದ್ರು, ನಾನು ಮಾತಾಡಿದ್ರೆ, ಎಲ್ಲಾ ಹರಾಜು ಹಾಕ್ತೀನಿ ಎಂದು ಬುಸುಗುಟ್ಟಿದ್ದಾರೆ. ಬಿಜೆಪಿ ನಾಯಕರು ಮೋದಿ ಕಾಲು ಹಿಡಿದು ಪರಿಹಾರ ಕೊಡಿಸಲಿ, ಬಿಜೆಪಿಯವರು ಹೇಳುವ ಮಾತುಗಳು ನೀರಿನ ಮೇಲೆ ಬರೆದಂತೆ ಎನ್ನುವ ಮೂಲಕ ಬಿಜೆಪಿ ನಾಯಕರ ಮಾತುಗಳು ಕ್ಷಣಿಕ ಸುಖವನ್ನು ನೀಡುತ್ತವೆ. ಸುಧೀರ್ಘವಾಗಿ ಬದುಕಿಗೆ ಸಹಕಾರಿಯಲ್ಲ ಎನ್ನುವುದನ್ನು ಹೇಳಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಕಾಲು ಹಿಡಿದುಕೊಂಡು ಪರಿಹಾರ ಕೇಳಲು ಆಗಲಿಲ್ಲ ಎಂದಾದರೆ, ನಾನೇ ಬೇಕಿದ್ದರೆ ಕಾಲು ಹಿಡಿದುಕೊಂಡು ಪರಿಹಾರ ಕೇಳುತ್ತೇನೆ ಅಂತಾನೂ ಸವಾಲು ಎಸೆದಿದ್ದಾರೆ.

ಕಾಂಗ್ರೆಸ್ ನಾಯಕರು ನೇರವಾಗಿ ಕೇಂದ್ರದಿಂದ ಪರಿಹಾರ ಕೊಡಿಸಿ ಎಂದು ಸವಾಲು ಹಾಕಿದ್ರೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿಉತ್ತರ ಕನ್ನಡದ ಕುಮಟಾದಲ್ಲಿ ಮಂಡ್ಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಕೇವಲ ಬಿಜೆಪಿ, ಕಾಂಗ್ರೆಸ್ ನಡುವಿನ ಹೋರಾಟವಲ್ಲ, ಲೋಕಸಭಾ ಚುನಾವಣೆ ಹನುಮ ಭಕ್ತರು ಹಾಗು ಟಿಪ್ಪು ಭಕ್ತರ ನಡುವೆ ನಡೆಯುವ ಹೋರಾಟ ಎಂದು ಬಣ್ಣಿಸಿದ್ದಾರೆ. ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಅನುಮತಿ ಪಡೆದು ಭಗವಾಧ್ವಜ ಹಾರಿಸಲಾಗಿತ್ತು. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ ಧ್ವಜ ಕಟ್ಟೆಯ ಮೇಲೆ ಧ್ವಜ ಹಾರಿಸಿದ್ದನ್ನ ಕೆಳಗಿಳಿಸಿದ್ದಾರೆ. ಪೊಲೀಸರು, ಜಿಲ್ಲಾಧಿಕಾರಿಗಳು ಒತ್ತಾಯ ಪೂರ್ವಕವಾಗಿ ಹನುಮ ಧ್ವಜವನ್ನ ಕೆಳಗಿಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಪೊಲೀಸರನ್ನ ಬಳಸಿಕೊಂಡು ಧ್ವಜ ಕೆಳಗಿಳಿಸಿರುವ ಸರ್ಕಾರ, ಭಗವಾಧ್ವಜಕ್ಕೆ ಅಪಮಾನ ಮಾಡಿದೆ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿರುವಂತೆ ಕೇಂದ್ರದಿಂದಲೇ ಒಂದೇ ಒಂದು ಕೆಲಸ ಮಾಡಿಸಿಕೊಂಡು ಬರುವುದಕ್ಕೆ ಸಾಧ್ಯವಿಲ್ಲದ ಬಿಜೆಪಿ ಸಂಸದರು ಹಾಗು ನಾಯಕರು ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಚುನಾವಣೆ ಸಮಯದಲ್ಲಿ ಧರ್ಮ ರಾಜಕಾರಣದಲ್ಲಿ ಮುಳುಗಿ ಏಳುವ ನಾಯಕರು ಚುನಾವಣೆ ಬಂದ ಕೂಡಲೇ ಕೇಸರಿ ಟವೆಲ್ ಖರೀದಿ ಮಾಡುತ್ತಾರೆ. ಆ ಬಳಿಕ ಮತ್ತೆ ಚುನಾವಣೆ ಬರುವ ತನಕ ಶಾಂತ ರೀತಿಯಲ್ಲಿ ಇರುತ್ತಾರೆ ಎನ್ನುವುದು ಪರಿಪೂರ್ಣ ಸತ್ಯ. ಆದರೆ ರಾಜ್ಯದ ಜನರು ಈ ರೀತಿಯ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸ್ತಾರಾ..? ಅಥವಾ ಕೆಲಸ ಮಾಡುವ ಸರ್ಕಾರ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಬೆನ್ನಿಗೆ ನಿಲ್ತಾರಾ..? ಲೋಕಸಭಾ ಚುನಾವಣೆ ಫಲಿತಾಂಶವೇ ಉತ್ತರ ನೀಡಬೇಕಿದೆ.
#Kotturumanjunath #BJP #JDS #politics #Mandya