ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನವರಿಗೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಕರೋನಾ ಲಸಿಕೆ ಕಾರಣ ಎಂಬ ವಾದ ವಿವಾದಗಳ ನಡುವೆ ಈಗ ICMR ವರದಿ ನೀಡಿದ್ದು, ಯುವಜನರಲ್ಲಿ ಹಠಾತ್ ಸಾವಿನ ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ಹೇಳಿದೆ.
ವೈದ್ಯಕೀಯ ಸಂಶೋಧನಾ ಸಂಸ್ಥೆಯು ಕೋವಿಡ್-19 ನಿಂದಾಗಿ ಆಸ್ಪತ್ರೆಗೆ ದಾಖಲಾಗುವುದು, ಕುಟುಂಬದ ಹಿನ್ನೆಲೆ ಮತ್ತು ಕೆಲವು ಜೀವನಶೈಲಿಯಿಂದಾಗಿ ಭಾರತದಲ್ಲಿ ಯುವಕರಲ್ಲಿ ಹಠಾತ್ ಸಾವಿನ ಪ್ರಕರಣವನ್ನು ಹೆಚ್ಚಿಸಿವೆ ಎಂದು ICMR ಹೇಳಿದೆ.
ಈ ಅಧ್ಯಯನವು ಅಕ್ಟೋಬರ್ 1, 2021 ರಿಂದ ಮಾರ್ಚ್ 31, 2023 ರವರೆಗೆ ದೇಶದ 47 ಆಸ್ಪತ್ರೆಗಳ ಮೇಲೆ ಕೇಂದ್ರೀಕರಿಸಿದೆ. ಜೊತೆಗೆ ಈ ಅಧ್ಯಯನವು 18 ರಿಂದ 45 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು ಇಲ್ಲಿ ವ್ಯಕ್ತಿಗಳು ಯಾವುದೇ ಕಾಯಿಲೆಯಿಂದ ಬಳಲದೆ ಹಠಾತ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು. ಅಂತಹ 729 ಪ್ರಕರಣಗಳನ್ನು ತಂಡವು ಅಧ್ಯಯನ ಮಾಡಿದೆ.
2,916 ಅಧ್ಯಯನಕ್ಕಾಗಿ ತೆಗೆದುಕೊಂಡ ಜನರ ವೈದ್ಯಕೀಯ ಇತಿಹಾಸ, ಧೂಮಪಾನ, ಮದ್ಯಪಾನ ಮತ್ತು ತೀವ್ರವಾದ ದೈಹಿಕ ಚಟುವಟಿಕೆಯಂತಹ ನಡವಳಿಕೆ ಹೀಗೆ ವಿವಿಧ ಅಂಶಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಆ ವ್ಯಕ್ತಿ ಕೋವಿಡ್‌ಗೆ ಲಸಿಕೆ ನೀಡಲಾಗಿದೆಯೇ?ಅಥವಾ ಬೇರೆ ಯಾವುದಾದರೂ ಲಸಿಕೆ ನೀಡಲಾಗಿದೆಯೇ? ಎನ್ನುವುದನ್ನು ಕೂಡಾ ಗಣನೆಗೆ ತೆಗೆದುಕೊಳ್ಳಲಾಗಿದೆ.
ಅಧ್ಯಯನದ ಬಳಿಕ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನ ಅಪಾಯವನ್ನು ಕಡಿಮೆ ಹಾಗೂ ಒಂದೇ ಡೋಸ್ ತೆಗೆದುಕೊಂಡವರು ಕೂಡಾ ಕಡಿಮೆ ಅಪಾಯದ ಮಟ್ಟವನ್ನು ಹೊಂದಿರುತ್ತಾರೆ ಎಂದು ಹೇಳಿದೆ.