ರಾಜ್ಯದ ಏಳು ಮಂದಿ IAS ಅಧಿಕಾರಿಗಳ ಕಾರ್ಯಸ್ಥಾನ ವರ್ಗಾಯಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರಾಗಿ IRS ಅಧಿಕಾರಿ ಜಯರಾಮ್ ರಾಯ್‌ಪುರ ನೇಮಕಗೊಂಡಿದ್ದಾರೆ. ಈ ಮೊದಲಿದ್ದ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ತುಳಸಿ ಮದ್ದಿನೇನಿ ಜಾಗಕ್ಕೆ ಕೇಂದ್ರದ ಕಂದಾಯ ಇಲಾಖೆಯ DTD ವಿಭಾಗದ IRS ಅಧಿಕಾರಿ ಜಯರಾಮ್ ರಾಯ್‌ಪುರ ಅವರನ್ನು ಸರ್ಕಾರ ನೇಮಿಸಿದೆ.
BESCOM MD ರಾಜೇಂದ್ರ ಚೋಳನ್ ವರ್ಗಾವಣೆಯಾಗಿ ಸ್ಮಾರ್ಟ್ ಸಿಟಿ MDಯಾಗಿ ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಲಾಗಿದೆ. ಈ ಮೊದಲು ರಾಜೇಂದ್ರ ಚೋಳನ್ ಬೆಸ್ಕಾಂ ಜೊತೆಗೆ ಸ್ಮಾರ್ಟ್ ಸಿಟಿ ನಿಗಮ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ರಾಜೇಂದ್ರ ಚೋಳನ್ ರಿಂದ ತೆರವಾಗಿದ್ದ BESCOM MDಯಾಗಿ ಮಹಾಂತೇಶ್ ಬಿಳಗಿಯನ್ನು ನೇಮಿಸಲಾಗಿದೆ.
ಗದಗ ಜಿಲ್ಲಾಧಿಕಾರಿಯಾಗಿದ್ದ ಸುಂದ್ರೇಶಬಾಬು ಕೊಪ್ಪಳ ಡಿಸಿಯಾಗಿ ವರ್ಗಾವಣೆಗೊಂಡಿದ್ದಾರೆ. ಜೆ ಮಂಜುನಾಥ್ ರಿಂದ ತೆರವಾಗಿದ್ದ ಬೆಂಗಳೂರು ಡಿಸಿ ಕುರ್ಚಿಗೆ ಶ್ರೀನಿವಾಸ್ ಕೆ ನೇಮಕವಾಗಿದ್ದಾರೆ. ಈ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ ಜವಾಬ್ದಾರಿವಹಿಸಿಕೊಂಡಿದ್ದಾರೆ.
KSMSCL ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಗರಾಜ್ NM ವರ್ಗಾವಣೆಗೊಂಡು ಚಿಕ್ಕಬಳ್ಳಾಪುರ ಡಿಸಿಯಾಗಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಕುಮಟಾ ಉಪ ವಿಭಾಗದ ಉಪ ಆಯುಕ್ತರಾಗಿದ್ದ ರಾಹುಲ್ ರತ್ನಮ್ ಪಾಂಡೆ ಕೃಷ್ಣ ಮೇಲ್ದಂಡೆ ಯೊಜನೆ ಜನರಲ್ ಮ್ಯಾನೇಜರ್ ಆಗಿ ವರ್ಗವಾಣೆಗೊಳಿಸಿ ಸರ್ಕಾರ ಆದೇಶಿಸಿದೆ.
