ಕಳೆದ ಹಲವು ದಿನಗಳಿಂದ ಅರವಿಂದ ಬೆಲ್ಲದ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂ ಸುದ್ದಿ ಎಲ್ಲೆ ಚರ್ಚೆಗೆ ಗ್ರಾಸವಾಗಿತ್ತು ಈ ಕುರಿತು ಸ್ವತಂ ಅರವಿಂದ ಬೆಲ್ಲದ ಅವರೇ ಪ್ರತಿಕ್ರಿಸಿದ್ದು, ನಾನು ಬಿಜೆಪಿ ಬಿಟ್ಟು ಹೋಗುತ್ತೇನೆ ಎಂಬುದು ಶುದ್ದ ಸುಳ್ಳು. ಬೇರೆ ಬೇರೆ ಪತ್ರಿಕೆಗಳಲ್ಲಿ ಆ ಕುರಿತು ಸುದ್ದಿ ಪ್ರಕಟವಾಗಿತ್ತು,ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲೆ ಇದ್ದು ಪಕ್ಷ ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಧಾರಾವಾಡ ನಗರದಲ್ಲಿ ಇಂದು ಸುದ್ದಿಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಇದುವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಕುರಿತು ಪ್ರತಿಕ್ರಿಯೆ ನೀಡಲು ಇಂದು ಪತ್ರಿಕಾ ಗೋಷ್ಠಿ ಕರೆದಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ. ನನಗೆ ಭಾರತೀಯ ಜನತಾ ಪಕ್ಷ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಲು ಅನುವು ಮಾಡಿಕೊಟ್ಟಿದೆ. ಹಾಗಾಗಿ ಪಕ್ಷ ಬೀಡುವ ಪ್ರಶ್ನೆಯೇ ಇಲ್ಲಾ. ಈ ಮೂಲಕ ಸಾರ್ವಜನಿಕರಿಗೆ ನಾನು ಗೇಳುವುದೇನೆಂದರೆ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ, ಪಕ್ಷದಲ್ಲೇ ಇದ್ದು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.