ಚಿಕ್ಕಬಳ್ಳಾಪುರ: ಸಿಎಂ ಬದಲಾವಣೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ನವರು ಸಿಎಂ ಸ್ಥಾನವನ್ನು ನನ್ನನ್ನೇ ಮುಂದುವರಿಸಿ ಎಂದರೆ ಮುಂದುವರಿಯುತ್ತೇನೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಅವರು ಏನು ಹೇಳುತ್ತಾರೆ ಅದನ್ನ ನಾವು ಕೇಳೋದು. ಹೈಕಮಾಂಡ್ ತೀರ್ಮಾನ ಮಾಡಿದರೆ ನನ್ನನ್ನೇ ಮುಂದುವರಿಸಿ ಎಂದರೆ ಮುಂದುವರಿಯುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಒಪ್ಪಿಕೊಳ್ಳಬೇಕು, ಡಿಕೆಶಿನೂ ಒಪ್ಪಿಕೊಳ್ಳಬೇಕು ಎಂದರು.
ನಾಲ್ಕೈದು ತಿಂಗಳ ಹಿಂದೆ ಸಂಪುಟ ಪುನಾರಚನೆ ಮಾಡಬೇಕೆಂದು ಹೈಕಮಾಂಡ್ ಬಳಿ ಹೋದಾಗ ಮಾಡಿ ಎಂದಿದ್ದರು. ಆದರೆ ನಾನು ಸರ್ಕಾರಕ್ಕೆ 2.5 ವರ್ಷ ಮುಗಿದ ಮೇಲೆ ಮಾಡೋನಾ ಎಂದಿದ್ದೆ. ಈಗ ಹೈಕಮಾಂಡ್ ಏನು ಹೇಳ್ತಾರೋ ಆ ರೀತಿ ಮಾಡ್ತಿನಿ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಾರೆ










