ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮನೆಗಳ ಹಾಗೂ ಇತರೆ ಕಡೆಗಳಲ್ಲಿ ನಡೆದಿರುವ ಐಟಿ ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ಹೆದ್ದಾರಿ ಹಾಗೂ ನೀರಾವರಿಗೆ ಸಂಬಂಧಪಟ್ಟಂತೆ 4 ರಾಜ್ಯಗಳ 47 ಕಡೆ ಐಟಿ ದಾಳಿ ನಡೆದಿದ್ದು, ಐಟಿ ದಾಳಿ ವೇಳೆ 4.69 ಕೋಟಿ ನಗದು ಜಪ್ತಿ ಮಾಡಲಾಗಿದೆ. 8.67 ಕೋಟಿ ಮೊತ್ತದ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಶೋಧ ಕಾರ್ಯದ ವೇಳೆ ಅಕ್ರಮವಾಗಿ 40 ಕ್ಕೂ ಹೆಚ್ಚು ಜನರ ಹೆಸರಿನಲ್ಲಿ ನೀರಾವರಿ, ಹೆದ್ದಾರಿ ಯೋಜನೆಗಳಲ್ಲಿ ಉಪ ಗುತ್ತಿಗೆ ಪಡೆದು ಅಕ್ರಮ ಎಸಗಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿ ಎಸ್ ವೈ ಆಪ್ತರ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಮಾಜಿ ಸಿಎಂ ಹೆಚ್.ಡಿ.ಕೆ
ದಾಳಿ ವೇಳೆ ಮೂರು ಕಂಪನಿಗಳು ನಕಲಿಯಾಗಿ ಖರೀದಿ ಮಾಡಿ ಕೆಲಸ ಮಾಡಿದ್ದಾಗಿ ದಾಖಲೆಗಳನ್ನು ಸೃಷ್ಟಿ ಮಾಡಿ ಲಾಭ ಗಳಿಸುರುವುದು ಪತ್ತೆಯಾಗಿದೆ. ನಕಲಿಯಾಗಿ ಕಾರ್ಮಿಕ ವೆಚ್ಚ, ನಕಲಿಯಾಗಿ ಬೋಗಸ್ ಸಬ್ ಕಂಟ್ರಾಕ್ಟ್ ಗಳು ಮಾಡಿರೊದು ಪತ್ತೆಯಾಗಿದೆ. ವಿಚಾರಣೆ ವೇಳೆ ನಕಲಿಯಾಗಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದಾಗಿ ಐಟಿ ಇಲಾಖೆಯ ಅಧಿಕಾರಿಗಳ ಮುಂದೆ ಸಬ್ ಕಾಂಟ್ರಾಕ್ಟರ್ಗಳು ಒಪ್ಪಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಬಿಎಸ್ ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ.!
ಪತ್ತೆ ಹಚ್ಚಿದ 750 ಕೋಟಿ ಆಸ್ತಿಯಲ್ಲಿ 487 ಕೋಟಿ ಅಕ್ರಮ ಎಸಗಿರುವುದಾಗಿ ಸಂಬಂಧಪಟ್ಟ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಅಕ್ರಮ ಪತ್ತೆ, ಐಟಿ ಅಧಿಕಾರಿಗಳು ಡಿಜಿಟಲ್ ಸಾಕ್ಷಿಗಳು ಮತ್ತು ಫೈಲ್ಗಳ ಮೂಲಕ ಬೃಹತ್ ಅಕ್ರಮ ಪತ್ತೆ ಹಚ್ಚಿದ್ದಾರೆ.
ಹೆಚ್ಚಿನ ವಿಚಾರಣೆ ಮುಂದುವರೆಯುವುದಾಗಿ ಐಟಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಬಿಎಸ್ ವೈ ಆಪ್ತರ ಮೇಲಿನ ದಾಳಿಯ ಹಿಂದಿನ ಆರ್ ಎಸ್ ಎಸ್ ಲೆಕ್ಕಾಚಾರಗಳೇನು?
ಅಕ್ಟೋಬರ್ 7 ರಿಂದ ನಡೆಯುತ್ತಿರುವ ಸರಣಿ ದಾಳಿ ಸಾಕಷ್ಟು ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಬಿಎಸ್‌ವೈ ಆಪ್ತ, ನೀರಾವರಿ ಕಾಮಗಾರಿ ಗುತ್ತಿಗೆದಾರ ಉಮೇಶ್ ಮೇಲೆ ನಡೆದಿರುವ ದಾಳಿಯ ಹಿನ್ನೆಲೆ ಯಡಿಯೂರಪ್ಪರನ್ನು ಗುರಿಮಾಡಲಾಗಿದೆಯೇ ಎಂಬ ವಿಶ್ಲೇಷಣೆಗಳು ನಡೆದಿದ್ದವು.
ಡಿ.ಕೆ.ಶಿವಕುಮಾರ್ ಪ್ರಚಾರ ಗುತ್ತಿಗೆ ಪಡೆದಿದ್ದ ಡಿಸೈನ್ ಬಾಕ್ಸ್ಡ್ ಸಂಸ್ಥೆ ಮೇಲೆ IT ದಾಳಿ