ಹಾವೇರಿ : ನನಗೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗೋದು ಇಷ್ಟವಾಗೋದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನನಗೆ ಚುನಾವಣಾ ಅಖಾಡದಲ್ಲಿ ಎದುರಾಳಿ ಇರಬೇಕು. ಎದುರಾಳಿಯ ವಿರುದ್ಧ ನಾನು ಸ್ಪರ್ಧಿಸಿ ಗೆಲ್ಲಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು. ಆದರೆ ನನಗೆ ಚುನಾವಣಾ ಅಖಾಡದಲ್ಲಿ ಕುಸ್ತಿ ಇದ್ದರೆ ತುಂಬಾನೇ ಇಷ್ಟವಾಗುತ್ತೆ. ಯಾರನ್ನು ಬೇಕಿದ್ದರೂ ನನ್ನ ವಿರುದ್ಧ ಚುನಾವಣಾ ಅಖಾಡಕ್ಕೆ ನಿಲ್ಲಿಸಬಹುದು ಎಂದು ಹೇಳುವ ಮೂಲಕ ವಿಪಕ್ಷಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲ್ ಹಾಕಿದ್ದಾರೆ.

ಇಲ್ಲಿಯವರೆಗೆ ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ನಿಂದ ವಿನಯ್ ಕುಲಕರ್ಣಿ ಕಣಕ್ಕಿಳಿಯುತ್ತಾರ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ನ 2ನೆ ಪಟ್ಟಿಯಲ್ಲಿ ಧಾರವಾಡದಿಂದ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಲಾಗಿದ್ದು ಶಿಗ್ಗಾವಿಯ ಟಿಕೆಟ್ನ್ನು ಎಐಸಿಸಿ ಇನ್ನೂ ಯಾರಿಗೂ ಘೋಷಣೆ ಮಾಡಿಲ್ಲ. ಉನ್ನತ ಮೂಲಗಳ ಪ್ರಕಾರ ವಿನಯ್ ಕುಲಕರ್ಣಿ ಈ ಬಾರಿ ಧಾರವಾಡದ ಜೊತೆಯಲ್ಲಿ ಶಿಗ್ಗಾವಿಯಿಂದಲೂ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗ್ತಿದ್ದು ಮೂರನೇ ಪಟ್ಟಿಯಲ್ಲಿ ಶಿಗ್ಗಾವಿ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.