ಕಾಂಗ್ರೆಸ್ ಜನಸಂಖ್ಯೆ ನಿಯಂತ್ರಣ ಮಸೂದೆ ತಂದು ಕಾನೂನು ಮಾಡಿದ್ದರೆ, ನನಗೆ ನಾಲ್ಕು ಮಕ್ಕಳು ಇರುತ್ತಿರಲಿಲ್ಲ
ಗೋರಖ್ಪುರದ ಸಂಸದರಾಗಿರುವ ಭೋಜ್ಪುರಿ ನಟ ಕಮ್ ರಾಜಕಾರಣಿ ರವಿ ಕಿಶನ್, ನನಗೆ ನಾಲ್ಕು ಮಕ್ಕಳಾಗಿದ್ದರೆ ಅದು ನನ್ನ ತಪ್ಪಲ್ಲ.. ಕಾಂಗ್ರೆಸ್ ತಪ್ಪು ಎಂದಿದ್ದಾರೆ.
ಈ ಹಿಂದೆ ಜನಸಂಖ್ಯೆ ನಿಯಂತ್ರಣ ಮಸೂದೆಗೆ ಆಗ್ರಹಿಸಿದ್ದ ರವಿ ಕಿಶನ್, ನಾಲ್ಕು ಮಕ್ಕಳ ತಂದೆ ಎಂದು ಟೀಕೆಗೆ ಒಳಗಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋರಖ್ಪುರದ ಸಂಸದ ರವಿ ಕಿಶನ್ ನನಗೆ ನಾಲ್ಕು ಮಕ್ಕಳಿದ್ದಾರೆ. ಆದರೆ ಅದು ನನ್ನ ತಪ್ಪಲ್ಲ. ಅದು ಕಾಂಗ್ರೆಸ್ ತಪ್ಪು. ಒಂದು ವೇಳೆ ಕಾಂಗ್ರೆಸ್ ಜನಸಂಖ್ಯೆ ನಿಯಂತ್ರಣ ಮಸೂದೆ ತಂದು ಕಾನೂನು ಮಾಡಿದ್ದರೆ, ನನಗೆ ನಾಲ್ಕು ಮಕ್ಕಳು ಇರುತ್ತಿರಲಿಲ್ಲ. ಅಷ್ಟು ಮಕ್ಕಳನ್ನು ಹೊಂದಿದ್ದಕ್ಕೆ ಪಶ್ಚಾತ್ತಾಪವಿದೆ ಎಂದು ರವಿ ಕಿಶನ್ ಹೇಳಿದ್ದಾರೆ.