2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ,(karnataka assembly election 2023) ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ಪಕ್ಷದಿಂದ ಸಿಎಂ ಯಾರಾಗ್ತಾರೆ ಅನ್ನೋ ಕೂತೂಹಲ ರಾಜ್ಯದ ಜನತೆಯಲ್ಲಿದೆ. ಈ ಬೆನ್ನಲ್ಲೇ ಇಂದು ಕಾಂಗ್ರೆಸ್(congress) ನಾಯಕ ಸಿದ್ದರಾಮಯ್ಯ(siddaramaiah) ದೆಹಲಿಗೆ ಭೇಟಿ ನೀಡಿದ್ದಾರೆ. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(dk shivakumar) ಕೂಡ ದೆಹಲಿಗೆ ಹೊರಟಿದ್ದು, ಅದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ(press meet) ಮಾತನಾಡಿದ್ರು.
ʻಇಂದು ನನ್ನ ಜನ್ಮದಿನ.. ನನ್ನ ಗುರುಗಳನ್ನ ಭೇಟಿ ಮಾಡಿದ ಮೇಲೆ ದೆಹಲಿಗೆ ಹೋಗಬೇಕು. ನೆನ್ನೆ ನಮ್ಮ ಶಾಸಕಾಂಗ ಪಕ್ಷದ ಸಭೆ ನಡೆದಿದೆ. 135 ಶಾಸಕರು ಅವರವರ ಅಭಿಪ್ರಾಯವನ್ನ ನಾವು ಪಕ್ಷದ ವರಿಷ್ಠರಿಗೆ ಬಿಟ್ಟುಕೊಟ್ಟಿದ್ದೇವೆ. ಯಾರ ನಂಬರ್ ಬಗ್ಗೆಯೂ ಮಾತನಾಡೋ ಶಕ್ತಿ ನನಗಿಲ್ಲ.. ನನಗೆ ಶಕ್ತಿ ಇರೋದು ನನ್ನ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಪಕ್ಷ 135 ಸ್ಥಾನ ಗೆದ್ದಿದೆ. ನಾವು ಮಾಡಿದಂತದ ಚುನಾವಣಾ ನೀತಿ, ರಣತಂತ್ರ, ಒಗ್ಗಟ್ಟಿನ ಪ್ರದರ್ಶನ, ಐಕ್ಯತೆ ಎಲ್ಲವೂ ಸಹ ದೇಶಕ್ಕೆ ಮಾದರಿ. ಇನ್ನೂ ಸಹಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು. ಆದರೂ ನಮಗೆ ಸಮಾಧಾನ ಇದೆ. ಈಗಾಗಲೇ ವರಿಷ್ಠರು ದೆಹಲಿಗೆ ನನ್ನ ಮತ್ತು ಸಿದ್ದರಾಮಯ್ಯನವರನ್ನ ಕರೆದಿದ್ದಾರೆ. ನಾನು ಹೋಗೋದು ಸ್ವಲ್ಪ ತಡವಾಗಿದೆ ಅಂತ ಡಿಕೆ ಶಿವಕುಮಾರ್(DK shivakumar) ಹೇಳಿಕೆ ನೀಡಿದ್ರು.